ಅತ್ಯಾಚಾರ ನಡೆಯುವುದು ಗಂಡು- ಹೆಣ್ಣಿನ ಪರಸ್ಪರ ಸಮ್ಮತಿಯಿಂದಲೇ: ಉತ್ತರ ಪ್ರದೇಶ ಸಚಿವ
ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವಂತೆಯೇ, ರೇಪ್ ಬಗ್ಗೆ ಜನಪ್ರತಿನಿಧಿಗಳ ಬೇಜವಾಬ್ದಾರಿಯುತ ಹೇಳಿಕೆಗಳು ಹೆಚ್ಚುತ್ತಿವೆ.

ಲಖನೌ: ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವಂತೆಯೇ, ರೇಪ್ ಬಗ್ಗೆ ಜನಪ್ರತಿನಿಧಿಗಳ ಬೇಜವಾಬ್ದಾರಿಯುತ ಹೇಳಿಕೆಗಳು ಹೆಚ್ಚುತ್ತಿವೆ. ರೇಪ್ ಬಗ್ಗೆ ಈ ಹಿಂದೆ ಬಂದಿದ್ದ ವಿವಾದಾತ್ಮಕ ಹೇಳಿಕೆಗಳ ಸಾಲಿಗೆ ಉತ್ತರ ಪ್ರದೇಶದ ಸಚಿವ ನೀಡಿರುವ ಹೇಳಿಕೆ ಹೊಸದಾಗಿ ಸೇರ್ಪಡೆಯಾಗಿದೆ.
ಉತ್ತರ ಪ್ರದೇಶ ಸಚಿವ ತೋತಾರಾಮ್ ಯಾದವ್ ಪ್ರಕಾರ ಅತ್ಯಾಚಾರ ನಡೆಯುವುದು ಗಂಡು-ಹೆಣ್ಣಿನ ಪರಸ್ಪರ ಸಮ್ಮತಿಯಿಂದ. ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವುದರ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ತೋತಾರಾಮ್ ಯಾದವ್, ರೇಪ್ ಅಂದರೇನು ಎಂದು ಪ್ರಶ್ನಿಸುವುದು ಅಲ್ಲದೇ, ಅಂಥದ್ದು ನಡೆಯುತ್ತಿಲ್ಲ. ರೇಪ್ ನಡೆಯುವುದು ಗಂಡು- ಹೆಣ್ಣಿನ ಪರಸ್ಪರ ಒಪ್ಪಿಗೆಯಿಂದ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಚಿವರ ಹೇಳಿಕೆ ಇಲ್ಲಿಗೇ ನಿಲ್ಲುವುದಿಲ್ಲ. ಈತ ಅತ್ಯಾಚಾರದಲ್ಲೂ ಎರಡು ವಿಧಗಳನ್ನು ಸಂಶೋಧಿಸಿದ್ದು, ಒಂದು ಒತ್ತಾಯಪೂರ್ವಕ ಅತ್ಯಾಚಾರವಾದರೆ ಮತ್ತೊಂದು ಪರಸ್ಪರ ಒಪ್ಪಿಗೆಯ ಮೂಲಕ ನಡೆಯುತ್ತದೆ ಎಂದು ಹೇಳಿದ್ದಾರೆ. ಒಂದು ವರ್ಷದ ಹಿಂದೆ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಸಹ ಅತ್ಯಾಚಾರದ ಬಗ್ಗೆ ಇಂತಹದ್ದೇ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಹುಡುಗರು ತಪ್ಪು ಮಾಡುವುದು ಸಾಮಾನ್ಯ ಎಂದು ಮುಲಾಯಂ ಸಿಂಗ್ ಯಾದವ್ ನೀಡಿದ್ದ ಹೇಳಿಕೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈಗ ಅದೇ ಪಕ್ಷದ ಮತ್ತೋರ್ವ ಮುಖಂಡ ಅತ್ಯಾಚಾರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


