ವಿಶ್ವದ ಮೊದಲ ತಲೆಬರುಡೆ, ತಲೆತೊಗಲು ಕಸಿ ಯಶಸ್ವಿ
ಕಸಿ ಶಸ್ತ್ರಉಚಿಕಿತ್ಸೆಯಲ್ಲಿ ಮಹತ್ವದ ಮೈಲುಗಲ್ಲು. ಮೊಟ್ಟಮೊದಲ ಬಾರಿಗೆ ಅಮೆರಿಕದ ವೈದ್ಯರು 55 ವರ್ಷದ ವ್ಯಕ್ತಿಯೊಬ್ಬರ...

ಹ್ಯೂಸ್ಟನ್: ಕಸಿ ಶಸ್ತ್ರಚಿಕಿತ್ಸೆಯಲ್ಲಿ ಮಹತ್ವದ ಮೈಲುಗಲ್ಲು. ಮೊಟ್ಟಮೊದಲ ಬಾರಿಗೆ ಅಮೆರಿಕದ ವೈದ್ಯರು 55 ವರ್ಷದ ವ್ಯಕ್ತಿಯೊಬ್ಬರ ತಲೆಬುರುಡೆ ಮತ್ತು ತಲೆತೊಗಲು ಕಸಿ ಶಸ್ತ್ರಉಚಿಕಿತ್ಸೆ ಯನ್ನು ಯಶಸ್ವಿಯಾಗಿ ಪೂರೈಸಿ ದ್ದಾರೆ. ಅಷ್ಟೇ ಅಲ್ಲ, ಈ ಶಸ್ತ್ರಉಚಿಕಿತ್ಸೆ ನಡೆಯುತ್ತಿದ್ದಾಗಲೇ ಕಿಡ್ನಿ ಹಾಗೂ ಮೇದೋಜೀರಕ ಗ್ರಂಥಿಯ ಕಸಿಯೂ ನಡೆದಿದೆ. ಬರೋಬ್ಬರಿ 15 ಗಂಟೆ ಅವಧಿಯ ಶಸ್ತ್ರಚಿಕಿತ್ಸೆ ನಡೆಸಿದ್ದು ಅಮೆರಿಕದ ಎಂಡಿ ಆ್ಯಂಡರ್ಸನ್ ಕ್ಯಾನ್ಸರ್ ಸೆಂಟರ್ ಮತ್ತು ಹ್ಯೂಸ್ಟನ್ ಮೆಥಡಿಸ್ಟ್ ಆಸ್ಪತ್ರೆಯ ತಜ್ಞರು.
ಅಪರೂಪದ ಕ್ಯಾನ್ಸರ್: ಆಸ್ಟಿನ್‍ನ ಸಾಫ್ಟ್ ವೇರ್ ಡೆವಲಪರ್ ಜೇಮ್ಸ್ ಬಾಯ್ಸನ್‍ಗೆ 5 ವರ್ಷವಿದ್ದಾಗಲೇ ಮಧುಮೇಹ ಕಾಯಿಲೆ ಬಂದಿತ್ತು. ಹೀಗಾಗಿ 1992ರಲ್ಲಿ ಅವರಿಗೆ ಮೂತ್ರಜನಕಾಂಗ- ಮೇದೋಜೀರಕಾಂಗದ ಕಸಿ ನಡೆಸಲಾಗಿತ್ತು. ಬಳಿಕ ಅವರು ನಿರಂತರ ಗುಳಿಗೆ ಗಳನ್ನು ಸೇವಿಸಬೇಕಾಗಿ ಬಂದಿದ್ದರಿಂದ, ಅಪರೂಪದ ಕ್ಯಾನ್ಸರ್‍ಗೆ ತುತ್ತಾಗಬೇಕಾಯಿತು. ಕ್ಯಾನ್ಸರ್‍ಗೆಂದು ನೀಡಲಾಗುತ್ತಿದ್ದ ರೇಡಿಯೇಷನ್ ಥೆರಪಿ ಅವರ ತಲೆಯ ಒಂದು ಭಾಗವನ್ನೇ ಹಾನಿ ಮಾಡಿತು. ತಲೆಯಲ್ಲಿ 10 -10 ಇಂಚಿನ ರಂಧ್ರ ಉಂಟಾಯಿತು. ಮತ್ತೊಂದೆಡೆ ಕಸಿಮಾಡಲಾದ ಅಂಗಾಂಗಗಳೂ ವಿಫಲವಾದವು. ಈ ಎಲ್ಲ ಸಮಸ್ಯೆಗೂ ಒಟ್ಟಿಗೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವೈದ್ಯರ ತಂಡ ಹೆಜ್ಜೆಯಿಟ್ಟಿತು.
ಏಕಕಾಲದಲ್ಲಿ 3 ಶಸ್ತ್ರಚಿಕಿತ್ಸೆ: ತಲೆಬುರುಡೆ, ತೊಗಲು, ಕಿಡ್ನಿ, ಮೇದೋಜೀರಕಾಂಗದ ಕಸಿಯನ್ನು ಒಂದೇ ಬಾರಿಗೆ ಮಾಡಿದರೆ, ಒಂದೇ ರೀತಿಯ ಔಷಧದಿಂದ ಅವುಗಳನ್ನು ರಕ್ಷಿಸಿಕೊಳ್ಳಬಹುದು ಎನ್ನುವುದು ವೈದ್ಯ ಆಲೋಚನೆಯಾಗಿತ್ತು. ಅದರಂತೆ, 15 ಗಂಟೆಗಳ ಕಾಲ ಈ ಮೂರೂ ಅಂಗಗಳ ಕಸಿ ನಡೆದು, ಅದು ಯಶಸ್ವಿಯೂ ಆಯಿತು ಎಂದು ಬಿಬಿಸಿ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


