ದೇಶ

250 ನೌಕರರನ್ನು ವಜಾಗೊಳಿಸಿದ ಡಿಸ್ನಿ ವಾಲ್ಟ್- ಭಾರತೀಯರ ನೇಮಕ

ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಮನರಂಜನೆಯ ದೈತ್ಯ ಡಿಸ್ನಿ ವಾಲ್ಟ್ ತನ್ನ 250 ಅಮೆರಿಕಾ ನೌಕರರನ್ನು ವಜಾಗೊಳಿಸಿದೆ.....

250 ನೌಕರರನ್ನು ವಜಾಗೊಳಿಸಿದ ಡಿಸ್ನಿ ವಾಲ್ಟ್-  ಭಾರತೀಯರ ನೇಮಕ
ವಾಲ್ಟ್ ಡಿಸ್ನಿ
Published On :

ನ್ಯೂಯಾರ್ಕ್: ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಮನರಂಜನೆಯ ದೈತ್ಯ ಡಿಸ್ನಿ ವಾಲ್ಟ್ ತನ್ನ 250 ಅಮೆರಿಕಾ ನೌಕರರನ್ನು ವಜಾಗೊಳಿಸಿ, ಆ ಹುದ್ದೆಗಳಿಗೆ ಎಚ್ 1-ಬಿ ವೀಸಾ ಹೊಂದಿರುವ ಭಾರತೀಯರನ್ನು ನೇಮಕ ಮಾಡಿದೆ.

ಹೊರಗುತ್ತಿಗೆ ಕಂಪನಿಗಳು ತಾತ್ಕಾಲಿಕ ವೀಸಾ ಬಳಸಿಕೊಂಡು ಹೇಗೆ ಭಾರತೀಯರನ್ನು ನೇಮಿಸಿದ್ದರ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ತಾತ್ಕಾಲಿಕ ನೌಕರಿ ವೀಸಾ ಪಡೆದಿರುವವರಿಗೆ ಉದ್ಯೋಗ ನೀಡಿರುವ ಬಗ್ಗೆ ಕಾಂಗ್ರೆಸ್ ಚರ್ಚೆ ನಡೆಸಿದೆ.

ಸುಮಾರು 250 ಅಮೆರಿಕಾ ನೌಕರರನ್ನು ವಜಾಗೊಳಿಸಿರುವ ಡಿಸ್ನಿ ಭಾರತ ಮೂಲದ ಉದ್ಯೋಗಿಗಳನ್ನು ಹೊರಗುತ್ತಿಗೆ ಮೂಲಕ ನೇಮಿಸಿಕೊಳ್ಳಲಾಗಿದೆ ಎಂದು ಕಳೆದ ವರ್ಷ ಅಕ್ಟೋಬರ್ ನಲ್ಲಿ  ಡಿಸ್ನಿ ಉದ್ಯೋಗಿಗಳು ತಿಳಿಸಿದ್ದರು.

ಕಡಿಮೆ ಸಂಬಳಕ್ಕೆ, ಸರಿಯಾದ ತರಬೇತಿ ಇಲ್ಲದ ಬದಲಿ ಕೆಲಸಗಾರರನ್ನು ಭಾರತದಿಂದ ಕರೆತರಲಾಗಿದೆ, ಅವರಿಗೆ ಅಮೆರಿಕನ್ನರೇ ತರಬೇತಿ ನೀಡಬೇಕು  ಎಂದು ಕೆಲಸ ಕಳೆದು ಕೊಂಡಿರುವ ಅಮೆರಿಕನ್ನರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಇನ್ನು ನಮ್ಮ ಕೆಲಸ ಕಳೆದುಕೊಂಡು ಬೇರೆಯವರಿಗೆ ತರಬೇತಿ ಕೊಡುವುದು ದೊಡ್ಡ ಅವಮಾನ, ಅದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಮೆರಿಕಾದ ನೌಕರನೊಬ್ಬ ಅಸಮಾಧಾನ ವ್ಯಕ್ತ ಪಡಿಸಿದ್ದಾನೆ. ನೌಕರರನ್ನು ವಜಾಗೊಳಿಸುವುದು ಕಂಪನಿಯ ಪುನರ್ ಸಂಘಟನೆ ಒಂದು ಭಾಗ. ಅಗತ್ಯಕ್ಕಿಂತ ಹೆಚ್ಚು ಸ್ಥಾನಗಳಿದ್ದರೇ ಅಂತ ನೌಕರರನ್ನು ತೆಗೆದು ಹಾಕುವುದು ಅನಿವಾರ್ಯ ಎಂದು ಡಿಸ್ನಿ ಕಂಪನಿಯ ಕಾರ್ಯ ನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.