ದೇಶ

ಬಡ್ಡಿ ದರ ಇಳಿಸಲು ಬ್ಯಾಂಕ್‍ಗಳ ನಿರ್ಧಾರ

ಗೃಹ, ವಾಹನ ಸಾಲಗಾರರಿಗೆ ಖುಷಿಯ ಸುದ್ದಿ ಆರ್ ಬಿಐನಿಂದ ಹೊರಬಿದ್ದಿದೆ. ಬ್ಯಾಂಕ್‍ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿಯನ್ನು ಆರ್ ಬಿಐ...

ಬಡ್ಡಿ ದರ ಇಳಿಸಲು ಬ್ಯಾಂಕ್‍ಗಳ ನಿರ್ಧಾರ
ಸಂಗ್ರಹ ಚಿತ್ರ
Published On :

ಮುಂಬೈ/ನವದೆಹಲಿ: ಗೃಹ, ವಾಹನ ಸಾಲಗಾರರಿಗೆ ಖುಷಿಯ ಸುದ್ದಿ ಆರ್ ಬಿಐನಿಂದ ಹೊರಬಿದ್ದಿದೆ. ಬ್ಯಾಂಕ್‍ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿಯನ್ನು ಆರ್ ಬಿಐ ಶೇ.0.25ರಷ್ಟು ಇಳಿಕೆ ಮಾಡಲು ನಿರ್ಧರಿಸಿದೆ. ಹೀಗಾಗಿ, ಬ್ಯಾಂಕ್‍ಗಳು ಕೂಡ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ ಕಡಿಮೆ ಮಾಡುವ ನಿರೀಕ್ಷೆ ಇದೆ. ಇದರಿಂದಾಗಿ ಸಾಲಗಳ ಮೇಲಿನ ತಿಂಗಳ ಸಮಾನ ಮಾಸಿಕ ಕಂತು ಹಾಗೂ ಬಡ್ಡಿ ಕೊಂಚ ಕಡಿಮೆಯಾಗುವ ಸಾಧ್ಯತೆ ಇದೆ.

ಗಮನಾರ್ಹ ಅಂಶವೆಂದರೆ ಈ ಹಿಂದೆ ಆರ್ ಬಿಐ ಬಡ್ಡಿ ದರ ಕಡಿತಗೊಳಿಸಿದ್ದರೂ ಬ್ಯಾಂಕ್‍ಗಳು ಅದನ್ನು ಗ್ರಾಹಕರಿಗೆ ವರ್ಗಾವಣೆ ಮಾಡಿರಲಿಲ್ಲ. ಇದ ರಿಂದಾಗಿ ದೇಶದ ಹೆಚ್ಚಿನ ಜನರಿಗೆ ನಿರ್ಧಾರದಿಂದ ಹೆಚ್ಚಿನ ಪ್ರಯೋಜನ ಏನೂ ಆಗಿರಲಿಲ್ಲ. ಆದರೆ ಮಂಗಳವಾರ ನಿರ್ಧಾರ ಹೊರ ಬೀಳುತ್ತಲೇ ಸರ್ಕಾರಿ ಸ್ವಾಮ್ಯದ ಅಲಹಾಬಾದ್ ಬ್ಯಾಂಕ್ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಬಡ್ಡಿ ದರ ಇಳಿಕೆ ಮಾಡಿವೆ. ಅಂದ ಹಾಗೆ ಈ ಕಡಿತ ಪ್ರಸಕ್ತ ವರ್ಷದಲ್ಲಿ ಇದು ಮೂರನೇಯದ್ದಾಗಿದೆ.

ಜಿಡಿಪಿ ಇಳಿಕೆ
ಮೋದಿ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಶೇ.7.8ರಷ್ಟು ದಾಖಲಿಸುವ ಗುರಿ ಹೊಂದಿತ್ತು. ಆದರೆ ಹಾಲಿ ವರ್ಷ ಮುಂಗಾರಿನ ಕೊರತೆ ಮತ್ತು ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿನ ಏರುಪೇರನ್ನು ನಿರೀಕ್ಷೆಯಲ್ಲಿಟ್ಟು ಕೊಂಡು ಅದರ ಪ್ರಮಾಣವನ್ನು ಶೇ.7.5ಕ್ಕೆ ಇಳಿಕೆ ಮಾಡಿದೆ.
ಸೆನ್ಸೆಕ್ಸ್ ಪತನ
ಮುಂಗಾರು ಕೊರತೆ, ಬರದ ಮುನ್ಸೂಚನೆ, ಬಡ್ಡಿ ದರ ಇಳಿಕೆಯಿಂದಾಗಿ ಷೇರು ಪೇಟೆಯಲ್ಲಿ ಸಂವೇದಿ ಸೂಚ್ಯಂಕ 661 ಅಂಕ ಹಾಗೂ ನಿಫ್ಟಿ ಸೂಚ್ಯಂಕ 196 ಅಂಕಗಳಷ್ಟು ಕುಸಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.