ಮಾರಿಷಸ್ ಗೆ ಮಹಿಳಾ ಅಧ್ಯಕ್ಷೆ
ಮಾರಿಷಸ್‍ನ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಅಮಿನಾಹ್ ಗುರಿಬ್ ಫಕೀಮ್ (56) ಆಯ್ಕೆಯಾಗಿದ್ದಾರೆ.

ಪೋರ್ಟ್ ಲೂಯಿಸ್: ಮಾರಿಷಸ್‍ನ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಅಮಿನಾಹ್ ಗುರಿಬ್ ಫಕೀಮ್ (56) ಆಯ್ಕೆಯಾಗಿದ್ದಾರೆ.
ವಿಶ್ವದಲ್ಲೇ ಹೆಸರು ಮಾಡಿರುವ ಖ್ಯಾತಿ ವಿಜ್ಞಾನಿ ಹಾಗೂ ಜೀವಶಾಸ್ತ್ರಜ್ಞೆಯಾಗಿರುವ ಗುರಿಬ್ ಫಕೀಮ್ ಅವರ ಆಯ್ಕೆ ಪ್ರತಿಪಕ್ಷ ಕೂಡ ಸಮ್ಮತಿ ಸೂಚಿಸಿದೆ. ಶುಕ್ರವಾರ ಅವರು ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ. 1968ರಲ್ಲಿ ಬ್ರಿಟನ್‍ನಿಂದ ಸ್ವಾತಂತ್ರ್ಯ ಗಳಿಸಿದ ದ್ವೀಪದ ಪ್ರಥಮ ಮಹಿಳಾ ಅಧ್ಯಕ್ಷೆ ಇವರಾಗಿದ್ದಾರೆ. ಮಾಜಿ ಅಧ್ಯಕ್ಷ ಕೈಲಾಶ್ ಪುರ್ಯಾಗ್ ಅವರು ಮಾರಿಷಸ್‍ನ ನಾಮ ಮಾತ್ರದ ನಾಯಕನಾಗಿದ್ದ ಕಾರಣ ಶುಕ್ರವಾರ ಪದತ್ಯಾಗ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


