ಶೀಘ್ರದಲ್ಲೇ ಭಾರತೀಯ ಮಾರಾಟಕ್ಕೆ ಮ್ಯಾಗಿ: ನೆಸ್ಲೆ ಇಂಡಿಯಾ
ಇನ್‌ಸ್ಟಂಟ್ ನೂಡಲ್ ಮ್ಯಾಗಿಯನ್ನು ಪುನಃ ಚಿಲ್ಲರೆ ಮಾರಾಟ ಅಂಗಡಿಗಳಲ್ಲಿ ಶೀಘ್ರದಲ್ಲೇ ತರುತ್ತೇವೆ ಎಂದು ನೆಸ್ಲೆ ಕಂಪನಿಯ ಭಾರತದ ಮುಖ್ಯಸ್ಥ ಸುರೇಶ್ ನಾರಾಯಣನ್ ಹೇಳಿದ್ದಾರೆ...

ನವದೆಹಲಿ: ಇನ್‌ಸ್ಟಂಟ್ ನೂಡಲ್ ಮ್ಯಾಗಿಯನ್ನು ಪುನಃ ಚಿಲ್ಲರೆ ಮಾರಾಟ ಅಂಗಡಿಗಳಲ್ಲಿ ಶೀಘ್ರದಲ್ಲೇ ತರುತ್ತೇವೆ ಎಂದು ನೆಸ್ಲೆ ಕಂಪನಿಯ ಭಾರತದ ಮುಖ್ಯಸ್ಥ ಸುರೇಶ್ ನಾರಾಯಣನ್ ಹೇಳಿದ್ದಾರೆ.
ವ್ಯವಸ್ಥಾಪಕ ನಿರ್ದೇಶಕ ಎಟಿನೆ ಬೆನೆಟ್ ಬದಲಿಗೆ ಭಾರತದ ಕಾರ್ಯಾಚರಣೆ ಉಸ್ತುವಾರಿ ವಹಿಸಿಕೊಂಡಿರುವ ನಾರಾಯಣನ್ ಡೇರಿ, ಚಾಕೋಲೇಟ್ ಮತ್ತು ಸಿಹಿತಿಂಡಿಗಳ ಕಡೆ ಗಮನಹರಿಸಲಾಗುತ್ತದೆ ಎಂದು ಹೇಳಿದರು.
ಮ್ಯಾಗಿ ನೂಡಲ್ಸ್ ಕುರಿತು ವಿವಾದದ ಬಗ್ಗೆ ನೇರ ಕಾಮೆಂಟ್ ಮಾಡದೇ ನಾವು ಮ್ಯಾಗಿಯನ್ನು ಶೆಲ್ಫ್‌ಗಳಲ್ಲಿ ತರಬೇಕಾಗಿದೆ. ಸದ್ಯಕ್ಕೆ ವಿಷಯ ಕೋರ್ಟ್‌ನಲ್ಲಿದೆ. ಎಲ್ಲವೂ ಅದರ ತೀರ್ಪನ್ನು ಆದರಿಸಿದೆ. ನಾವು ಕಾದುನೋಡೋಣ ಎಂದು ಹೇಳಿದರು.
ಮುಂಬೈ ಹೈಕೋರ್ಟ್ ಸೋಮವಾರ ಮ್ಯಾಗಿ ನಿಷೇಧ ಕುರಿತು ತನ್ನ ತೀರ್ಪನ್ನು ನೀಡುವುದೆಂದು ನಿರೀಕ್ಷಿಸಲಾಗಿದೆ. ಭಾರತದ ಅಧಿಕೃತ ಆಹಾರ ನಿಯಂತ್ರಕವು ಜೂನ್ 5ರಂದು ಮ್ಯಾಗಿಯನ್ನು ನಿಷೇಧಿಸಿತ್ತು. ಅದರ ಮಾದರಿಗಳಲ್ಲಿ ಅಧಿಕ ಪ್ರಮಾಣದ ಸೀಸ ಮತ್ತು ಮಾನೋಸೋಡಿಯಂ ಗ್ಲುಟಾಮೇಟ್ ಇರುವುದು ಕಂಡುಬಂದ ಬಳಿಕ ನಿಷೇಧ ವಿಧಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


