ದೇಶ

ಏರ್ ಇಂಡಿಯಾದಲ್ಲಿ ಇಲಿ ಪ್ರತ್ಯಕ್ಷ, ಕೆಳಗಿಳಿದ ವಿಮಾನ

ಇಲಿ ಕಾಟದಿಂದಾಗಿ ಏರ್ ಇಂಡಿಯಾ ವಿಮಾನವನ್ನು ಕೆಳಗಿಳಿಸಿದ ಕುತೂಹಲಕಾರಿ ಘಟನೆ ಬೆಳಕಿಗೆ...

ಏರ್ ಇಂಡಿಯಾದಲ್ಲಿ ಇಲಿ ಪ್ರತ್ಯಕ್ಷ, ಕೆಳಗಿಳಿದ ವಿಮಾನ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಇಲಿ ಕಾಟದಿಂದಾಗಿ ಏರ್ ಇಂಡಿಯಾ ವಿಮಾನವನ್ನು ಕೆಳಗಿಳಿಸಿದ ಕುತೂಹಲಕಾರಿ ಘಟನೆ ಬೆಳಕಿಗೆ ಬಂದಿದೆ.

ಹೌದು, ಗುರುವಾರ ದೆಹಲಿಯಿಂದ ಇಟಲಿಯ ಮಿಲನ್‍ಗೆ ತೆರಳಿದ್ದ ಏರ್ ಇಂಡಿಯಾ ವಿಮಾನದಲ್ಲಿ ಇಲಿ ಕಾಣಿಸಿಕೊಂಡ ಪರಿಣಾಮ ಮತ್ತೆ ದೆಹಲಿಗೆ ಮರಳಿತ್ತು.

200 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಇಟಲಿಯ ಮಿಲನ್‍ಗೆ ತೆರಳುತ್ತಿದ್ದ ಎಐ 123 ಡ್ರೀಮ್‍ಲೈನರ್ ವಿಮಾನ ಹಾರಾಟ ಪ್ರಾರಂಭಿಸಿದ 2 ಗಂಟೆಗಳ ಬಳಿಕ ಪಾಕಿಸ್ತಾನ ವಾಯುಕ್ಷೇತ್ರದಲ್ಲಿದ್ದ ಸಮಯದಲ್ಲಿ ವಿಮಾನದ ಕ್ಯಾಬಿನ್‍ನಲ್ಲಿ ಇಲಿಯೊಂದು ಓಡಾಡುತ್ತಿರುವುದು ಪ್ರಯಾಣಿಕರು ಕಣ್ಣಿಗೆ ಬಿದ್ದು ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ತಕ್ಷಣ ವಿಮಾನ ದೆಹಲಿಗೆ ಮರಳಿದ್ದು ಇಲಿಯನ್ನು ಹೊರ ತೆಗೆದು ಮತ್ತೆ ಪ್ರಯಾಣ ಆರಂಭಿಸಿತು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.