ಕಲಾಂ ಗೆ ಸಂತಾಪ ಸೂಚಿಸುವ ಬದಲು ಮೋದಿಗೆ ಸಂತಾಪ ಸೂಚಿಸಿದ ರಮಣ್ ಸಿಂಗ್!
ಬಾಯ್ತಪ್ಪಿನಿಂದ ಒಮ್ಮೊಮ್ಮೆ ಎಂತಹ ಗಣ್ಯ ವ್ಯಕ್ತಿಗಳೂ ಮುಜುಗರಕ್ಕೀಡಾಗುತ್ತಾರೆ, ಈ ಸಾಲಿನಲ್ಲಿ ಚತ್ತೀಸ್ ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಕೂಡ ಸೇರಿದ್ದಾರೆ.

ರಾಯ್ ಪುರ: ಬಾಯ್ತಪ್ಪಿನಿಂದ ಒಮ್ಮೊಮ್ಮೆ ಎಂತಹ ಗಣ್ಯ ವ್ಯಕ್ತಿಗಳೂ ಮುಜುಗರಕ್ಕೀಡಾಗುತ್ತಾರೆ, ಈ ಸಾಲಿನಲ್ಲಿ ಚತ್ತೀಸ್ ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಕೂಡ ಸೇರಿದ್ದಾರೆ.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ನಿಧನಕ್ಕೆ ಸಂತಾಪ ಸೂಚಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸಂತಾಪ ಸೂಚಿಸಿರುವ ರಮಣ್ ಸಿಂಗ್, "ಮೋದಿ ಜಿ ಅವರ ನಿಧನಕ್ಕೆ ಸಂತಾಪ ಸೂಚಿಸುವೆ" ಎಂದು ಹೇಳಿ ಮುಜುಗರಕ್ಕೊಳಗಾಗಿದ್ದಾರೆ.
ಅಬ್ದುಲ್ ಕಲಾಂ ಅವರ ನಿಧನಕ್ಕೆ ಸಂತಾಪ ಸೂಚಿಸುವುದರೊಂದಿಗೆ ಮೋದಿಗೂ ಸಂತಾಪ ಸೂಚಿಸಿರುವ ರಮಣ್ ಸಿಂಗ್ ಬಿಜೆಪಿ ಪಕ್ಷವನ್ನೇ ಪ್ರತಿನಿಧಿಸುತ್ತಿದ್ದಾರೆ. ಇದಕ್ಕೂ ಕೆಲವು ದಿನಗಳ ಹಿಂದೆ ಜಾರ್ಖಂಡ್ ನ ಶಿಕ್ಷಣ ಸಚಿವೆ ಅಬ್ದುಲ್ ಕಲಾಂ ಅವರು ಜೀವಂತವಿರುವಾಗಲೇ ಅವರ ಫೋಟೋಗೆ ಹಾರ ಹಾಕಿ ಗೌರವ ಸೂಚಿಸಿ ಯಡವಟ್ಟು ಮಾಡಿಕೊಂಡಿದ್ದರು.
ಸಾರ್ವಜನಿಕ ಜೀವನದಲ್ಲೇ ಗುರುತಿಸಿಕೊಳ್ಳುವ ರಾಜಕಾರಣಿಗಳು ಕೆಲವೊಮ್ಮೆ ತಮ್ಮಿಂದಾಗುವ ಬಾಯ್ತಪ್ಪಿನಿಂದ ತೀವ್ರ ಮುಜುಗರವಂತೂ ಅನುಭವಿಸಲೇಬೇಕಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


