ಕಾರಣವಿಲ್ಲದೆಯೇ ನನ್ನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ: ಪ್ರಶಾಂತ್ ಪಾಂಡೆ
ಮಧ್ಯಪ್ರದೇಶದ ನಿಗೂಢ ಸಾವುಗಳ ಬಹುಕೋಟಿ ವ್ಯಾಪಂ ಹಗರಣ ಬಯಲಿಗೆ ಬರಲು ಕಾರಣರಾದ ವ್ಯಕ್ತಿಗಳಲ್ಲೊಬ್ಬರಾದ ಐಟಿ ಕನ್ಸಲ್ಟೆಂಟ್ ಪ್ರಶಾಂತ್ ಪಾಂಡೆ ಅವರ ಪತ್ನಿಯನ್ನು ಕಾರಣವಿಲ್ಲದೆ ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆಂದು ಪ್ರಶಾಂತ್ ಪಾಂಡೆ...

ನವದೆಹಲಿ: ಮಧ್ಯಪ್ರದೇಶದ ನಿಗೂಢ ಸಾವುಗಳ ಬಹುಕೋಟಿ ವ್ಯಾಪಂ ಹಗರಣ ಬಯಲಿಗೆ ಬರಲು ಕಾರಣರಾದ ವ್ಯಕ್ತಿಗಳಲ್ಲೊಬ್ಬರಾದ ಐಟಿ ಕನ್ಸಲ್ಟೆಂಟ್ ಪ್ರಶಾಂತ್ ಪಾಂಡೆ ಅವರ ಪತ್ನಿಯನ್ನು ಕಾರಣವಿಲ್ಲದೆ ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆಂದು ಪ್ರಶಾಂತ್ ಪಾಂಡೆ ಭಾನುವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಪ್ರಶಾಂತ್ ಪಾಂಡೆ, ಅವರು ಇದ್ದಕ್ಕಿದ್ದಂತೆ ಬಂದ ಮಧ್ಯಪ್ರದೇಶದ ಇಬ್ಬರು ಹೆಚ್ಚುವರಿ ಪೊಲೀಸರು ನನ್ನ ಪತ್ನಿಯನ್ನು ಕಾರಣ ಹೇಳದೆಯೇ ಬಂಧಿಸಿದ್ದರು. ನನ್ನ ಪತ್ನಿ ಕುಟುಂಬಸ್ಥರೊಂದಿಗೆ ಹಾಗೂ ನನ್ನೊಂದಿಗೆ ಮಾತನಾಡುವುದಕ್ಕೂ ಅವಕಾಶ ನೀಡಿದೆ ಆಕೆಯನ್ನು ಪೊಲೀಸ್ ಠಾಣೆ ಕರೆದೊಯ್ದಿದ್ದಾರೆ ಎಂದು ಹೇಳಿದ್ದಾರೆ.
ಈ ಹಿಂದೆ ಪ್ರಕರಣ ಸಂಬಂಧ ಹಿರಿಯ ಅಧಿಕಾರಿಗಳು, ಸುಪ್ರೀಂಕೋರ್ಟ್, ದೆಹಲಿ ಹೈ ಕೋರ್ಟ್, ಮಧ್ಯಪ್ರದೇಶದ ಹೈ ಕೋರ್ಟ್ ನನ್ನ ಕುಟುಂಬಕ್ಕೆ ಭದ್ರತೆ ಭರವಸೆ ನೀಡಿದ್ದರು. ಆದರೆ, ಈ ಎಲ್ಲಾ ಭರವಸೆಗಳ ಮಧ್ಯೆಯೂ ನನ್ನ ಪತ್ನಿಯನ್ನು ಅಧಿಕಾರಿಗಳು ಕಾರಣವಿಲ್ಲದೆಯೇ ಬಂಧನೊಕ್ಕಳಪಡಿಸಿದ್ದಾರೆ.
ಮೂಲಗಳ ಪ್ರಕಾರ ಪ್ರಶಾಂತ್ ಪಾಂಡೆ ಅವರು ಪತ್ನಿಯನ್ನು ಮಧ್ಯಪ್ರದೇಶದ ಪೊಲೀಸರು ಕೆಲವು ಗಂಟೆಗಳ ಕಾಲ ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸಿದ್ದು, ಆಕೆಯಿಂದ ರು.9.96 ಲಕ್ಷ ಹಣವನ್ನು ವಶಪಡಿಸಿಕೊಂಡು ನಂತರ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಐಟಿ ಕನ್ಸಲ್ಟೆಂಟ್ ಪ್ರಶಾಂತ್ ಪಾಂಡೆ ಎಂಬಾತ ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಹೆಸರು ಕೂಡಾ ವ್ಯಾಪಂ ಹಗರಣದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ನೀಡಿದ್ದರು. ಪ್ರಶಾಂತ್ ಪಾಂಡೆ ನೀಡಿರುವ ಮಾಹಿತಿಯಲ್ಲಿ ಹಗರಣದ ಪ್ರಮುಖ ಆರೋಪಿ ನಿತಿನ್ ಮೊಹಿಂದರ್‌ನ ಕಂಪ್ಯೂಟರ್ ಹಾರ್ಡ್ ಡಿಸ್ಕ್‌ನಲ್ಲಿ ದಾಖಲಾಗಿದ್ದ ಮಾಹಿತಿಯನ್ನು ಅಧಿಕಾರಿಗಳು ತಿರುಚಿದ್ದಾರೆ. ಅದರಲ್ಲಿರುವ ಎಕ್ಸೆಲ್‌ಷೀಟ್‌ನಲ್ಲಿ ಅಕ್ರಮವೆಸಗಿದ ಅಭ್ಯರ್ಥಿಗಳ ಪಟ್ಟಿಯಿತ್ತು. ಈ ಅಭ್ಯರ್ಥಿಗಳನ್ನು ಶಿಫಾರಸು ಮಾಡಿದ ವ್ಯಕ್ತಿಗಳ ಹೆಸರೂ ದಾಖಲಾಗಿತ್ತು. ಈ ಪಟ್ಟಿಯಲ್ಲಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರ ಹೆಸರನ್ನು ತನಿಖಾಧಿಕಾರಿಗಳು ಅಳಿಸಿ ಹಾಕ್ದಿದಾರೆ ಎಂದು ವಿವರಿಸಿದ್ದ. ಇದನ್ನೇ ಆಧಾರವಾಗಿಟ್ಟುಕೊಂಡು ದಿಗ್ವಿಜಯ್ ಸಿಂಗ್ ಅವರು ಎಸ್‌ಐಟಿಗೆ 15 ಪುಟಗಳ ಅಫಿಡವಿಟ್ ಸಲ್ಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


