11 ಕೋಟಿಗೂ ಅಧಿಕ ಮಂದಿಯಿಂದ ಪುಷ್ಕರ ಪುಣ್ಯ ಸ್ನಾನ
ಮಹಾಪುಷ್ಕರ ಮೇಳ ನಿನ್ನೆಗೆ ವೈಭವಯುತ ತೆರೆ ಕಂಡಿದ್ದು, 6.40 ಕೋಟಿ ಮಂದಿ ತೆಲಂಗಾಣದಲ್ಲಿ ಮತ್ತು ಉಳಿದವರು ಆಂಧ್ರಪ್ರದೇಶ...

ಹೈದರಾಬಾದ್: ತೆಲಂಗಾಣ ಮತ್ತು ಆಂಧ್ರಪ್ರದೇಶದ ಗೋದಾವರಿ ನದಿಯಲ್ಲಿ 12 ದಿನಗಳ ಮಹಾಪುಷ್ಕರ ಮೇಳದಲ್ಲಿ 11 ಕೋಟಿಗೂ ಅಧಿಕ ಮಂದಿ ಪುಣ್ಯಸ್ನಾನ ಮಾಡಿದ್ದಾರೆ.
ಮಹಾಪುಷ್ಕರ ಮೇಳ ನಿನ್ನೆಗೆ ವೈಭವಯುತ ತೆರೆ ಕಂಡಿದ್ದು, 6.40 ಕೋಟಿ ಮಂದಿ ತೆಲಂಗಾಣದಲ್ಲಿ ಮತ್ತು ಉಳಿದವರು ಆಂಧ್ರಪ್ರದೇಶ ರಾಜ್ಯದಲ್ಲಿ ಹರಿಯುವ ನದಿಯಲ್ಲಿ ಸ್ನಾನ ಮಾಡಿದ್ದಾರೆ.
ಈ ಕುರಿತು ರಾಜಮುಂಡಿಯಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಪುಷ್ಕರ ಇತಿಹಾಸದಲ್ಲಿ ಒಂದು ಮರೆಯಲಾಗದ ಘಟನೆಯಾಗಿ ಉಳಿಯಲಿದೆ. ಆರಂಭದ ದಿನ ಕಾಲ್ತುಳಿತವಾಗಿದ್ದು ಒಂದು ದುರದೃಷ್ಟಕರ. ಆ ನಂತರ ಅಧಿಕಾರಿಗಳು ಬಹಳ ಜಾಗರೂಕರಾಗಿದ್ದರು ಎಂದರು.
ಪ್ರತಿ 144 ವರ್ಷಗಳಿಗೊಮ್ಮೆ ಬರುವ ಮಹಾಪುಷ್ಕರ ಜುಲೈ 14ಕ್ಕೆ ಆರಂಭಗೊಂಡಿತ್ತು. ಆ ದಿನ ಉಂಟಾದ ನೂಕುನುಗ್ಗಲಿನಲ್ಲಿ ಕಾಲ್ತುಳಿತವುಂಟಾಗಿ 27 ಜನ ಸಾವನ್ನಪ್ಪಿದ್ದರು.
ಪುಷ್ಕರ ನದಿಗಳನ್ನು ಪೂಜಿಸುವ ಧಾರ್ಮಿಕ ಕಾರ್ಯಕ್ರಮವಾಗಿದ್ದು ಪ್ರತಿ 12 ವರ್ಷಗಳಿಗೊಮ್ಮೆ ಬರುತ್ತದೆ. ಆದರೆ ಈ ವರ್ಷ ಬಂದ ಪುಷ್ಕರ ಬಹಳ ಪವಿತ್ರವಾಗಿದ್ದು, 144 ವರ್ಷಗಳಿಗೊಮ್ಮೆ ಬರುತ್ತದೆ ಎಂದು ಅರ್ಚಕರು ಹೇಳುತ್ತಾರೆ, ದಕ್ಷಿಣ ಗಂಗೆ ಎಂದೇ ಖ್ಯಾತಿ ಗಳಿಸಿರುವ ಗೋದಾವರಿಯಲ್ಲಿ ದೇಶಾದ್ಯಂತದಿಂದ ಜನರು ಆಗಮಿಸಿ ಪವಿತ್ರ ಸ್ನಾನದಲ್ಲಿ ತೊಡಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


