ಗೌಹಾಟಿಯಲ್ಲಿ ಮಹಿಳೆಯನ್ನು ಮಾಟಗಾತಿ ಎಂದು ವಿವಸ್ತ್ರಗೊಳಿಸಿ ಶಿರಚ್ಚೇಧ
ಮನುಷ್ಯರೇ ನಡೆಸಿದ ಈ ಪೈಶಾಚಿಕ ಘಟನೆಯಲ್ಲಿ ೬೩ ವರ್ಷದ ಮಹಿಳೆಯೊಬ್ಬಳನ್ನು ಮಾಟಗಾತಿ ಎಂದು ದೂರಿ ಅವಳನ್ನು ನಗ್ನಗೊಳಿಸಿ ತಲೆ ಕತ್ತರಿಸಿರುವ
ಗೌಹಾಟಿ: ಮನುಷ್ಯರೇ ನಡೆಸಿದ ಈ ಪೈಶಾಚಿಕ ಘಟನೆಯಲ್ಲಿ ೬೩ ವರ್ಷದ ಮಹಿಳೆಯೊಬ್ಬಳನ್ನು ಮಾಟಗಾತಿ ಎಂದು ದೂರಿ ಅವಳನ್ನು ನಗ್ನಗೊಳಿಸಿ ತಲೆ ಕತ್ತರಿಸಿರುವ ಘಟನೆ ಅಸ್ಸಾಮಿನ ಗ್ರಾಮವೊಂದರಲ್ಲಿ ವರದಿಯಾಗಿದೆ.
ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಗಡಿಯಲ್ಲಿರುವ ಬಿಸ್ವನಾಥ್ ಚರೈಲಿ ಜಿಲ್ಲೆಯ ನಂ ೧ ಭೀಮಜೂಲಿ ಗ್ರಾಮದಲ್ಲಿ ಈ ಘಟನೆಯ ವರದಿಯಾಗಿದೆ.
ಸಂತ್ರಸ್ತೆ ಪೋನಿ ಉರಂಗ್ ಐದು ಮಕ್ಕಳ ತಾಯಿ ಬುಡಕಟ್ಟು ಜನಾನಂಗಕ್ಕೆ (ಟಿ ಬುಡಕಟ್ಟು ಸಮುದಾಯ) ಸೇರಿದವಳು. ಇವಳನ್ನು ಕಬ್ರಿ ಸಮುದಾಯಕ್ಕೆ ಸೇರಿದ ಪುರುಷರ ಗುಂಪೊಂದು ಶಿರಚ್ಚೇದ್ಧ ಮಾಡಿದೆ.
ಈ ಘಟನೆಗೆ ಸಂಬಧಿಸಿದಂತೆ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ.
"ಮಧ್ಯಾಹ್ನದ ವೇಳೆಯ ಜನರ ಗುಂಪೊಂದು ಪೋನಿ ಮನೆಗೆ ಲಗ್ಗೆ ಹಾಕಿ ನದಿ ಬಳಿಗೆ ಎಳೆದೊಯ್ದು ಮಚ್ಚಿನಿಂದ ಕತ್ತು ಕತ್ತರಿಸಿದ್ದಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಗ್ರಾಮದ ಢೋಂಗಿ ವೈದ್ಯೆ ಅಣಿಮಾ ರೊಂಘಾಂಗ್ಪಿ, ಪೋನಿಯನ್ನು ಮಾಟಗಾತಿ-ಮಂತ್ರವಾದಿ ಎಂದು ಹೇಳಿದ್ದಕ್ಕೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಈ ವೈದ್ಯೆ ಗ್ರಾಮದಲ್ಲಾದ ರೋಗಗಳಿಗೆ ಮತ್ತು ಸಾವಿಗೆ ಪೋನಿಯೇ ಕಾರಣ ಎಂದು ತಿಳಿಸಿದ್ದಳು ಎಂದು ತಿಳಿದುಬಂದಿದೆ. ತಲೆಮರೆಸಿಕೊಂಡಿರುವ ರೊಂಘಾಂಗ್ಪಿಗಾಗಿ ಹುಡುಕಾಟ ನಡೆದಿದೆ.
"ಸೋಮವಾರ ಪರಿಸ್ಥಿತಿ ಉದ್ವಿಘ್ನವಾಗಿತ್ತು. ಈಗ ನಿಯಂತ್ರಣದಲ್ಲಿದೆ. ಇದು ಎರಡು ಸಮುದಾಯದ ನಡುವಿನ ಕಾದಾಟವಾಗಿರುವುದರಿಂದ ನಾವು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಭದ್ರತಾ ಪಡೆಯನ್ನು ನೇಮಿಸಿದ್ದೇವೆ" ಎಂದು ಎಸ್ ಪಿ ಮನಬೇಂದ್ರ ರಾಯ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

