ದೇಶ

ಗಜೇಂದ್ರ ನೇಮಕ ಖಂಡಿಸುವವರು ಹಿಂದೂ ವಿರೋಧಿಗಳು: ಆರೆಸ್ಸೆಸ್

ಗಜೇಂದ್ರ ಚೌಹಾಣ್ ಅವರ ನೇಮಕವನ್ನು ವಿರೋಧಿಸುವವರು ಹಿಂದೂ ವಿರೋಧಿಗಳು. ಆರೆಸ್ಸೆಸ್ ಮುಖವಾಣಿ...

ಗಜೇಂದ್ರ ನೇಮಕ ಖಂಡಿಸುವವರು ಹಿಂದೂ ವಿರೋಧಿಗಳು: ಆರೆಸ್ಸೆಸ್
ಗಜೇಂದ್ರ ಚೌಹಾಣ್
Published On :

ನವದೆಹಲಿ: ``ಗಜೇಂದ್ರ ಚೌಹಾಣ್ ಅವರ ನೇಮಕವನ್ನು ವಿರೋಧಿಸುವವರು ಹಿಂದೂ ವಿರೋಧಿಗಳು''. ಆರೆಸ್ಸೆಸ್ ಮುಖವಾಣಿ `ಆರ್ಗನೈಜರ್'ನಲ್ಲಿ ಇಂತಹುದೊಂದು ಅಭಿಪ್ರಾಯ ವ್ಯಕ್ತವಾಗಿದೆ.
ನಟ ಹಾಗೂ ಬಿಜೆಪಿ ಸದಸ್ಯ ಗಜೇಂದ್ರ ಚೌಹಾಣ್ ಅವರನ್ನು ಎಫ್ ಟಿಐಐ(ಭಾರತೀಯ ಸಿನಿಮಾ ಮತ್ತು ಟೆಲಿವಿಷನ್ ಸಂಸ್ಥೆ) ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆಗಳು ಮುಂದುವರಿದಿರುವ ನಡುವೆಯೇ ಆರೆಸ್ಸೆಸ್ ತನ್ನ ಮುಖವಾಣಿಯಲ್ಲಿ ಇಂತಹ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

``ಚೌಹಾಣ್ ನೇಮಕ ವಿರೋಧಿಸುವವರೆಲ್ಲ ಹಿಂದೂ ವಿರೋಧಿಗಳು. ಮಾನಸಿಕವಾಗಿ ಅಸ್ವಸ್ಥರಾದವರು ಮಾತ್ರವೇ ಚೌಹಾಣ್‍ರ ಅರ್ಹತೆಯನ್ನು ಪ್ರಶ್ನಿಸುತ್ತಾರೆ. ಹಿಂದೂ ವಿರೋಧಿ ಪಡೆಗಳೇ ಪ್ರತಿಭಟನೆ ನಡೆಸುತ್ತಿರುವುದು. ಚೌಹಾಣ್ ಅವರು 150 ಸಿನಿಮಾಗಳು, 600 ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ, ಅವರಿಗೆ ಈ ಕ್ಷೇತ್ರದಲ್ಲಿ 34 ವರ್ಷಗಳ ಅನುಭವವಿದೆ.
ಅವರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳೆಲ್ಲ ದೊಡ್ಡ ಸಂಚು'' ಎಂದು ಲೇಖನದಲ್ಲಿ ತಿಳಿಸಲಾಗಿದೆ.

ಅಷ್ಟೇ ಅಲ್ಲ, ಎಫ್ ಟಿಐಐ ಮಾಜಿ ಮುಖ್ಯಸ್ಥ ಯು.ಆರ್.ಅನಂತಮೂರ್ತಿ ತಮ್ಮ ಜೀವನದಲ್ಲಿ ಎಂದೂ ಕೆಲಸ ಮಾಡಿಲ್ಲ. ನಿರ್ದೇಶಕ ರಾಜ್‍ಕುಮಾರ್ ಹಿರಾನಿ ಅವರೊಬ್ಬ ಹಿಂದೂ ವಿರೋಧಿ, ಮೃನಾಲ್ ಸೇನ್ ಅವರು ಕಟ್ಟಾ ನಕ್ಸಲ್‍ವಾದಿ, ಗಿರೀಶ್ ಕಾರ್ನಾಡ್ ಹಿಂದೂ ದ್ವೇಷಿ, ಶ್ಯಾಮ್ ಬೆನಗಲ್ ಬಿಜೆಪಿ ವಿರೋಧಿ, ಮಹೇಶ್ ಭಟ್ `ಅಶ್ಲೀಲತೆಯ ಪ್ರವರ್ತಕ' ಎಂದೂ ಲೇಖನದಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.