ಪ್ರಧಾನಿ, ಮುಖ್ಯಮಂತ್ರಿಗಳಿಗೆ ಜಾತಿ ಇಲ್ಲ: ಶರದ್ ಯಾದವ್
ಜಾತಿ ಆಧಾರಿತ ಜನಗಣತಿ ವರದಿ ಕುರಿತಂತೆ ಈಗಾಗಲೇ ಎನ್ ಡಿಎ ಸರ್ಕಾರದ ವಿರುದ್ಧ ಹಲವಾರು ಟೀಕೆ ವ್ಯಕ್ತಪಡಿಸುತ್ತಿರುವ ಲಾಲೂ ಪ್ರಸಾದ್ ಯಾದವ್ ಹಾಗೂ ನಿತೀಶ್ ಕುಮಾರ್ ಅವರ ಜೊತೆ ಇದೀಗ ಜೆಡಿ(ಯು) ಅಧ್ಯಕ್ಷ ಶರದ್ ಯಾದವ್ ಕೂಡ ಕೈ ಜೊಡಿಸಿದ್ದು...

ಪಾಟ್ನ: ಜಾತಿ ಆಧಾರಿತ ಜನಗಣತಿ ವರದಿ ಕುರಿತಂತೆ ಈಗಾಗಲೇ ಎನ್ ಡಿಎ ಸರ್ಕಾರದ ವಿರುದ್ಧ ಹಲವಾರು ಟೀಕೆ ವ್ಯಕ್ತಪಡಿಸುತ್ತಿರುವ ಲಾಲೂ ಪ್ರಸಾದ್ ಯಾದವ್ ಹಾಗೂ ನಿತೀಶ್ ಕುಮಾರ್ ಅವರ ಜೊತೆ ಇದೀಗ ಜೆಡಿ(ಯು) ಅಧ್ಯಕ್ಷ ಶರದ್ ಯಾದವ್ ಕೂಡ ಕೈ ಜೊಡಿಸಿದ್ದು, ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಸಾಂವಿಧಾನಿಕ ಅಧಿಕಾರವಿರುವುದರಿಂದ ಅವರಿಗೆ ಜಾತಿ ಎಂಬುದಿರುವುದಿಲ್ಲ ಎಂದು ಹೇಳುವ ಮೂಲಕ ಶನಿವಾರ ವ್ಯಂಗ್ಯವಾಡಿದ್ದಾರೆ.
ಬಿಹಾರ ಚುನಾವಣೆ ಸೀಟು ಹಂಚಿಕೆ ವಿಚಾರ ಕುರಿತಂತೆ ಇಂದು ಪಾಟ್ನದಲ್ಲಿ ಮಾತನಾಡಿರುವ ಅವರು, ಸಾಂವಿಧಾನಿಕ ಅಧಿಕಾರವಿರುವವರೆಗೂ ಪ್ರಧಾನಮಂತ್ರಿಗಾಗಲಿ ಅಥವಾ ಮುಖ್ಯಮಂತ್ರಿಗಳಿಗೇ ಆಗಲಿ ಅವರಿಗೆ ಜಾತಿ ಇರುವುದಿಲ್ಲ. ಜಾತಿ ಆಧಾರಿತ ಜನಗಣತಿ ಕುರಿತಂತೆ ಈ ರೀತಿಯಾಗಿ ಚರ್ಚೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ಕುರಿತಂತೆ ಲಾಲೂ ಪ್ರಸಾದ್ ಯಾದವ್ ಹಾಗೂ ನಿತೀಶ್ ಕುಮಾರ್ ಅವರು ಪ್ರತಿಭಟನೆ ನಡೆಸುತ್ತಿರುವುದರ ಕುರಿತಂತೆ ನನ್ನ ಬೆಂಬಲವಿದ್ದು, ಜು.27ರಂದು ನಡೆಯುವ ಪ್ರತಿಭಟನೆಯಲ್ಲಿ ನಾನು ಪಾಲ್ಗೊಳ್ಳಲಿದ್ದೇನೆ ಎಂದು ಹೇಳಿದ್ದಾರೆ.
ದೇಶದಲ್ಲಿ ಈಗಾಗಲೇ ಮಾಡಲಾಗಿರುವ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿಯ ಮಾಹಿತಿ ಬಿಡುಗಡೆ ಮಾಡಲು ಆಗ್ರಹಿಸಿ ಜುಲೈ.27 ರಂದು ಪ್ರತಿಭಟನೆ ನಡೆಸುವುದಾಗಿ ಲಾಲು ಪ್ರಸಾದ್ ಯಾದವ್ ಘೋಷಿಸಿದ್ದರು. ಇದೀಗ ತಮ್ಮ ಜಾತ್ಯತೀತ ಮೈತ್ರಿಯ ಗಟ್ಟಿತನವನ್ನು ಸಾಬೀತು ಪಡಿಸಲು ಲಾಲು ಜತೆ ಕೈ ಜೋಡಿಸಲು ಶರದ್ ಯಾದವ್ ಮುಂದೆ ಕೂಡ ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


