ದೇಶ

ಉಗ್ರರ ಅಂತ್ಯಕ್ರಿಯೆ ವೇಳೆ ನಮಾಜೆ ಜನಜಾ ಪಠಿಸಲ್ಲ: ಮುಸ್ಲಿಂ ಧಾರ್ಮಿಕ ಕೇಂದ್ರ ಫತ್ವಾ

ಭಯೋತ್ಪಾದನೆ ವಿರುದ್ಧ ಮುಸ್ಲಿಂ ಧಾರ್ಮಿಕ ಕೇಂದ್ರ ದರ್ಗಾ ಅಲಾ ಹಜರತ್‌ ಹೊಸ ಫತ್ವಾ ಹೊರಡಿಸಿದ್ದು, ಉಗ್ರರು ಹಾಗೂ ಉಗ್ರವಾದವನ್ನು ಬೆಂಬಲಿಸುವವರ ಅಂತ್ಯಕ್ರಿಯೆ...

ಉಗ್ರರ ಅಂತ್ಯಕ್ರಿಯೆ ವೇಳೆ ನಮಾಜೆ ಜನಜಾ ಪಠಿಸಲ್ಲ: ಮುಸ್ಲಿಂ ಧಾರ್ಮಿಕ ಕೇಂದ್ರ ಫತ್ವಾ
ನಮಾಜ್
Published On :

ಬರೇಲಿ: ಭಯೋತ್ಪಾದನೆ ವಿರುದ್ಧ ಮುಸ್ಲಿಂ ಧಾರ್ಮಿಕ ಕೇಂದ್ರ ದರ್ಗಾ ಅಲಾ ಹಜರತ್‌ ಹೊಸ ಫತ್ವಾ ಹೊರಡಿಸಿದ್ದು, ಉಗ್ರರು ಹಾಗೂ ಉಗ್ರವಾದವನ್ನು ಬೆಂಬಲಿಸುವವರ ಅಂತ್ಯಕ್ರಿಯೆ ವೇಳೆ 'ನಮಾಜೆ ಜನಜಾ' ಪಠಿಸಲಾಗದು ಎಂದು ಹೇಳಿದೆ.

ಈದ್‌ ಸಂದರ್ಭದಲ್ಲಿ ಉಗ್ರರಿಗೆ ಕಠಿಣ ಸಂದೇಶ ರವಾನಿಸಿರುವ ಇಸ್ಲಾಂ ಧಾರ್ಮಿಕ ಕೇಂದ್ರದ ಮುಖಂಡರು, ಉಗ್ರರು ಹಾಗೂ ಉಗ್ರ ಸಂಘಟನೆ ನಂಟು ಹೊಂದಿರುವವರ ಅಂತ್ಯಕ್ರಿಯೆ ವೇಳೆ ಕಡೆಯ ಪ್ರಾರ್ಥನೆಗೆ ನಿರ್ಬಂಧ ವಿಧಿಸಿ ಫತ್ವಾ ಹೊರಡಿಸಿದ್ದ ನಮಾಜೆ ಜನಜಾ ಪಠಿಸಲಾಗದು ಎಂದು ತಹ್ರೀಕೆ ತಹಫುಜ್‌ ಸುನ್ನಿಯತ್‌ನ ಪ್ರಧಾನ ಕಾರ್ಯದರ್ಶಿ ಮುಫ್ತಿ ಮೊಹಮ್ಮದ್‌ ಸಲೀಂ ನೂರಿ ಹೇಳಿದ್ದಾರೆ.

ಇಸ್ಲಾಂನಲ್ಲಿ ಅಂತ್ಯಕ್ರಿಯೆ ವೇಳೆ ಸಲ್ಲಿಸುವ ಈ ಪ್ರಾರ್ಥನೆಗೆ ಬಹಳ ಮಹತ್ವವಿದೆ. ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಜನರಿಗೆ ಬಹಿಷ್ಕಾರ ಹಾಕಲು ಕರೆ ನೀಡಲಾಗಿದೆ. 'ಉಗ್ರ ಸಂಘಟನೆಗಳೊಡನೆ ಯಾವುದೇ ರೀತಿಯಲ್ಲಿ ನಂಟು ಹೊಂದಿರುವ ಜನರ ಅಂತ್ಯಕ್ರಿಯೆಯಲ್ಲಿ ಮೌಲ್ವಿಗಳು, ಮುಫ್ತಿ ಅಥವಾ ಇನ್ನಿತರ ಧಾರ್ಮಿಕ ನಾಯಕರು 'ನಮಾಜೆ ಜನಜಾ' ಪಠಿಸುವುದಿಲ್ಲ ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.