ದೇಶ

ಮಣಿಪುರ ದಾಳಿ ಹಿಂದೆ ಚೀನಾ ಕೈವಾಡದ ಶಂಕೆ

ಈಶಾನ್ಯ ರಾಜ್ಯ ಮಣಿಪುರದ ಗುಡ್ಡಗಾಡುಗಳಲ್ಲಿ ಜೂ.4ರಂದು ಭಾರತೀಯ ಸೈನಿಕರ ಮೇಲೆ ನಡೆದಿದ್ದ ದಾಳಿಯಲ್ಲಿ ಚೀನಾದ ನೇರ ಕೈವಾಡ...

ಮಣಿಪುರ ದಾಳಿ ಹಿಂದೆ ಚೀನಾ ಕೈವಾಡದ ಶಂಕೆ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಈಶಾನ್ಯ ರಾಜ್ಯ ಮಣಿಪುರದ ಗುಡ್ಡಗಾಡುಗಳಲ್ಲಿ ಜೂ.4ರಂದು ಭಾರತೀಯ ಸೈನಿಕರ ಮೇಲೆ ನಡೆದಿದ್ದ ದಾಳಿಯಲ್ಲಿ ಚೀನಾದ ನೇರ ಕೈವಾಡ ಕುರಿತು ಸಂಶಯ ವ್ಯಕ್ತವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಯೋಧರ ಮೇಲೆ ನಡೆದ ಅತಿ ದೊಡ್ಡ ದಾಳಿ ಎಂದೇ ಹೇಳಲಾಗಿದ್ದ ಮಣಿಪುರದ ಚಂದೇಲ್ ಜಿಲ್ಲೆಯ ಈ ಘಟನೆಯಲ್ಲಿ 18 ಭಾರತೀಯ ಯೋಧರು ಸಾವಿಗೀಡಾಗಿದ್ದರು.

11 ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಈ ದಾಳಿಯನ್ನು ಸಂಯುಕ್ತ ರಾಷ್ಟ್ರ ವಿಮೋಚನಾ ವೇದಿಕೆ (ಯುಎನ್‍ಎಲ್ಎಫ್) ನೆರವಿನೊಂದಿಗೆ ರಾಷ್ಟ್ರೀಯ ನಾಗಾಲ್ಯಾಂಡ್ ಸೋಶಿಯಲಿಸ್ಟ್ ಕೌನ್ಸಿಲ್ (ಎನ್‍ಎಸ್‍ಸಿಎನ್-ಕೆ) ಸಂಘಟನೆ ನಡೆಸಿತ್ತು. ಈ ಎರಡೂ ಸಂಘಟನೆಗಳು ಪಶ್ಚಿಮ ಏಷ್ಯಾ ಸಂಯುಕ್ತ ವಿಮೋಚನಾ ವೇದಿಕೆ ನೆರಳಲ್ಲಿ ಆಶ್ರಯ ಪಡೆದಿವೆ ಎನ್ನಲಾಗಿದ್ದು, ಇವುಗಳಿಗೆ ಚೀನಾದ ನೇರ ಬೆಂಬಲವಿದೆ ಎಂದು ಹೇಳಲಾಗಿದೆ.

ಯುಎನ್‍ಎಲ್‍ಎಫ್ ಮುಖ್ಯಸ್ಥ ಆರ್.ಕೆ ಮೇಘನ್, ತಾನು 2008 ರಿಂದಲೂ ಚೀನಾದೊಂದಿಗೆ ನಂಟು ಹೊಂದಿರುವುದಾಗಿ ಹೇಳಿಕೊಂಡಿದ್ದಾನೆ. ಜತೆಗೆ ಕಾಠ್ಮಂಡುವಿನಲ್ಲಿ ಚೀನಾದ ಏಜೆಂಟನೊಬ್ಬನನ್ನು ಭೇಟಿಯಾಗಿದ್ದಾಗಿಯೂ ತಿಳಿಸಿದ್ದಾನೆ. ಚೀನಾದಆಹ್ವಾನ ಮೇರೆಗೆ ಮೇಘನ್ ಛೆಂಗುಡು ಸೋರ್ಸ್ ಮ್ಯಾನೇಜ್‍ಮೆಂಟ್ ಕನ್ಸಲ್ಟೆನ್ಸಿ ಗ್ರೂಪ್‍ಗೂ ಭೇಟಿ ನೀಡಿದ್ದ. ಜತೆಗೆ, ಸಿಯಾಚುನ್ ವಿವಿಗೂ ಮೇಘನ್ 2009ರಲ್ಲಿ ಭೇಟಿ ಕೊಟ್ಟಿದ್ದ ಎನ್ನುವ ವಿಚಾರವನ್ನು ಆತನೇ ಬಾಯ್ಬಿಟ್ಟಿದ್ದ ಎಂದು ಎನ್‍ಐಎ ಹೇಳಿದೆ.

ಇದಲ್ಲದೆ, ಚೀನಾವು ಮತ್ತೊಂದು ಖಾಸಗಿ ಕಂಪನಿಯಾದ ಅಯೇ ಕೀ ಕೌಂಗ್ ಕಂ.ಲಿ. ಮೂಲಕವೂ ಯುಎನ್ ಎಲ್‍ಎಫ್ ಜತೆಗೆ ಸಂಪರ್ಕ ಹೊಂದಿತ್ತು. ಇತ್ತೀಚೆಗೆ ಯುವಾನ್‍ನ ರುಯಿಲಿಯಲ್ಲಿ ಯುಎನ್‍ಎಲ್‍ಎಫ್ ಮುಖಂಡರ ಜತೆಗೆ ಮಾತುಕತೆಯೂ ನಡೆದಿತ್ತು. ಈ ಬಾರಿ ಚೀನಾ ಭಾರತೀಯ ಸೇನೆ ಹಾಗೂ ಈಶಾನ್ಯ ಭಾರತದಲ್ಲಿ ನಿಯೋಜಿಸಲ್ಪಟ್ಟಿರುವ ಕ್ಷಿಪಣಿ ಕುರಿತು ಮಾಹಿತಿ ಕೇಳಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.