ಒಪ್ಪಂದಕ್ಕೆ ಬಂದರೆ ಭಾರತ-ಪಾಕ್ ಸಮಸ್ಯೆ ಇತ್ಯರ್ಥಗೊಳ್ಳುತ್ತದೆ: ಪಾಕಿಸ್ತಾನ ರಾಯಭಾರಿ
ಭಾರತ-ಪಾಕಿಸ್ತಾನ ದೇಶಗಳು ಒಪ್ಪಂದಕ್ಕೆ ಬಂದರೆ ಕದನ ವಿರಾಮ ಉಲ್ಲಂಘನೆ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಪಾಕಿಸ್ತಾನ ರಾಯಭಾರಿ ಶನಿವಾರ ಹೇಳಿದೆ...

ನವದೆಹಲಿ: ಭಾರತ-ಪಾಕಿಸ್ತಾನ ದೇಶಗಳು ರಾಜಕೀಯವಾಗಿ ಒಪ್ಪಂದಕ್ಕೆ ಬಂದರೆ ಕದನ ವಿರಾಮ ಉಲ್ಲಂಘನೆ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಪಾಕಿಸ್ತಾನ ರಾಯಭಾರಿ ಶನಿವಾರ ಹೇಳಿದೆ.
ರಂಜಾನ್ ಹಬ್ಬದ ಪ್ರಯುಕ್ತ ಇಂದು ನವದೆಹಲಿ ಮಸೀದಿಗೆ ಭೇಟಿ ನೀಡಿ ನಂತರ ಮಾತನಾಡಿರುವ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಾಸಿತ್ ಅವರು, ಎರಡು ದೇಶಗಳ ಮಧ್ಯೆ ಇರುವ ಸಮಸ್ಯೆಗಳು ಸಾಧ್ಯವಾದಷ್ಟು ಬೇಗ ಇತ್ಯರ್ಥಗೊಳ್ಳತ್ತದೆ ಎಂಬು ನಂಬಿದ್ದೇವೆ. ಭಾರತ-ಪಾಕಿಸ್ತಾನ ದೇಶಗಳು ಒಮ್ಮತಕ್ಕೆ ಬರಬೇಕಿದ್ದು, ಎರಡು ದೇಶಗಳ ಮಧ್ಯೆ ಒಪ್ಪಂದವಾದರೆ ದೇಶದಲ್ಲಿರುವ ಬಡತನ, ಅನಕ್ಷರತೆ ಹಾಗೂ ಇನ್ನಿತರೆ ಸಮಸ್ಯೆಗಳೂ ಸಹ ಬಗೆಹರಿಯುತ್ತದೆ ಎಂದು ಹೇಳಿದ್ದಾರೆ.
ಈ ಹಿಂದೆ ನಾವು ಶಾಂತಿಯುತವಾಗಿಯೇ ಇದ್ದು ದೇಶವನ್ನು ಕಾಯುತ್ತಿದ್ದೇವೆ. ಆದರೆ, ನಮ್ಮ ಶಾಂತಿಯನ್ನು ಹಾಳು ಮಾಡಲು ಅಪ್ರಚೋದಿತ ದಾಳಿ ನಡೆಸಿದರೆ ಅದನ್ನು ನಾವು ಎಂದಿಗೂ ಸಹಿಸುವುದಿಲ್ಲ. ಪಾಕಿಸ್ತಾರ ಅಪ್ರಚೋದಿತ ದಾಳಿಗೆ ಭಾರತ ದಿಟ್ಟ ಉತ್ತರ ನೀಡುತ್ತದೆ ಎಂದು ಭಾರತೀಯ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದರು.
ಜಮ್ಮು-ಕಾಶ್ಮೀರದಲ್ಲಿ ಪಾಕ್ ಸೈನಿಕರು ಪದೇಪದೇ ಕದನ ವಿರಾಮ ಉಲ್ಲಂಘಿಸುತ್ತಿರುವುದನ್ನು ವಿರೋಧಿಸಿ ಜು.16 ರಂದು ನವದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


