ಲೈಂಗಿಕ ಕಿರುಕುಳ ಸಂತ್ರಸ್ತರಿಗೆ 3 ತಿಂಗಳ ವೇತನ ಸಹಿತ ರಜೆ
ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದವರಿಗೆ ಮೂರು ತಿಂಗಳ ವೇತನ ಸಹಿತ ರಜೆ ನೀಡಬೇಕು ಮತ್ತು ಆರೋಪ ಎದುರಿಸುವ ಸರ್ಕಾರಿ...

ನವದೆಹಲಿ: ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದವರಿಗೆ ಮೂರು ತಿಂಗಳ ವೇತನ ಸಹಿತ ರಜೆ ನೀಡಬೇಕು ಮತ್ತು ಆರೋಪ ಎದುರಿಸುವ ಸರ್ಕಾರಿ ನೌಕರನನ್ನು ತನಿಖೆ ಪೂರ್ಣಗೊಳ್ಳುವವರೆಗೆ ಬೇರೊಂದು ಇಲಾಖೆಗೆ ವರ್ಗ ಮಾಡಬೇಕು. ಹೀಗೆಂದು ಹೊಸದಾಗಿ ಬಿಡುಗಡೆ ಮಾಡಿರುವ ಸೂಚನಾ ಪಟ್ಟಿಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಜತೆಗೆ, ಸರ್ಕಾರಿ ನೌಕರನ ವಿರುದ್ಧ ಕೇಸು ದುರ್ಬಲವಾಗಿದೆ ಎಂಬ ಕಾರಣ ಹೇಳಿ ಲೈಂಗಿಕ ದೌರ್ಜನ್ಯ ಆರೋಪವನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎಂದೂ ಶಿಸ್ತು ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುವ ಸಮಿತಿಗೆ ಸಂತ್ರಸ್ತೆ ಅಥವಾ ಆರೋಪಿಯನ್ನು ವರ್ಗಾಯಿಸು ವಂತೆ ಶಿಫಾರಸು ಮಾಡುವ ಅಧಿಕಾರ ಇರುತ್ತದೆ. ಅಲ್ಲದೆ, ಸಮಿತಿಯು ಸಂತ್ರಸ್ತೆಗೆ 3 ತಿಂಗಳ ವೇತನ ಸಹಿ ರಜೆಯನ್ನೂ ನೀಡಬಹುದು. ಈ ರಜೆಯನ್ನು ಆಕೆಯ ಸಾಮಾನ್ಯ ರಜೆಯ ಖಾತೆಯಿಂದ ಕಳೆಯು ವಂತಿಲ್ಲ ಎಂದೂ ಸೂಚಿಸಲಾಗಿದೆ.
ಸಮಿತಿ ರಚನೆ: ಎಲ್ಲ ಸಚಿವಾಲಯಗಳು ಮತ್ತು ಸಂಸ್ಥೆಗಳಲ್ಲಿ ದೂರು ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿಯ ನೇತೃತ್ವವನ್ನು ಮಹಿಳೆಯೇ ವಹಿಸಬೇಕು ಅಥವಾ ಸಮಿತಿಯ ಅರ್ಧದಷ್ಟು ಸದಸ್ಯರು ಮಹಿಳೆಯರಾಗಿರಬೇಕು. ಮೇಲ್ಮಟ್ಟದಿಂದ ಒತ್ತಡ ಅಥವಾ ಪ್ರಭಾವ ಎದುರಾಗುವ ಸಾಧ್ಯತೆಯಿರುವುದರಿಂದ, ಸಮಿತಿಯಲ್ಲಿ ಹೊರಗಿನವರನ್ನು ಅಂದರೆ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಅರಿವಿರುವ ಎನ್‍ಜಿಒ ಅಥವಾ ಇತರೆ ಸಂಸ್ಥೆಯನ್ನು ಸೇರಿಸಿಕೊಳ್ಳಬಹುದು ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತನ್ನ ಸೂಚನೆಯಲ್ಲಿ ತಿಳಿಸಿದೆ.
3 ತಿಂಗಳೊಳಗೆ ದೂರು: ಸಂತ್ರಸ್ತೆಯು ಘಟನೆ ನಡೆದ 3 ತಿಂಗಳೊಳಗೆ ದೂರು ನೀಡಬೇಕು. ಒಂದು ವೇಳೆ ಆಕೆ ನೀಡಿದ ದೂರಿನಲ್ಲಿ ಹುರುಳಿಲ್ಲ ಅಥವಾ ಅದು ದುರುದ್ದೇಶದಿಂದದ್ದೇಶದಿಂದ ಕೂಡಿದ್ದು ಎಂದು ಗೊತ್ತಾದಲ್ಲಿ ಆಕೆಯ ವಿರುದ್ಧವೇ ಕ್ರಮ ಕೈಗೊಳ್ಳುವ ಅಧಿಕಾರ ಸಮಿತಿಗಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


