ದಕ್ಷಿಣ ಭಾರತದಲ್ಲಿ ಡೆಂಗ್ಯು, ಚಿಕೂನ್ ಗುನ್ಯಾ ಅಧಿಕ: ಅಧ್ಯಯನ
ಸೊಳ್ಳೆಗಳ ಮೂಲಕ ಹರಡುವ ಎರಡು ವೈರಸ್ ಗಳಾದ ಡೆಂಗ್ಯು ಮತ್ತು ಚಿಕೂನ್ ಗುನ್ಯಾ ಪ್ರಮಾಣ ದಕ್ಷಿಣ ಭಾರತದಲ್ಲಿ ಅಂದಾಜಿಗಿಂತ ಹೆಚ್ಚಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ...

ವಾಷಿಂಗ್ಟನ್: ಸೊಳ್ಳೆಗಳ ಮೂಲಕ ಹರಡುವ ಎರಡು ವೈರಸ್ ಗಳಾದ ಡೆಂಗ್ಯು ಮತ್ತು ಚಿಕೂನ್ ಗುನ್ಯಾ ಪ್ರಮಾಣ ದಕ್ಷಿಣ ಭಾರತದಲ್ಲಿ ಅಂದಾಜಿಗಿಂತ ಹೆಚ್ಚಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಅವರು ಇತ್ತೀಚೆಗೆ ಚೆನ್ನೈ ನಗರದ 50 ಕಡೆಗಳಲ್ಲಿ ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಪರೀಕ್ಷೆಗೆ ಒಳಪಟ್ಟವರಲ್ಲಿ ಎಲ್ಲರೂ ಡೆಂಗ್ಯು ಮತ್ತು ಚಿಕೂನ್ ಗುನ್ಯಾ ರೋಗಕ್ಕೆ ತುತ್ತಾದವರಾಗಿದ್ದರು.
ಡೆಂಗ್ಯು ಜ್ವರ 1940ರಿಂದ ನಮ್ಮ ದೇಶದಲ್ಲಿ ಇದ್ದರೂ ಇತ್ತೀಚಿನ ವರ್ಷಗಳಲ್ಲಿ ಅದರ ತೀವ್ರತೆ ಕಂಡುಬರುತ್ತಿದೆ. ರೋಗದ ಗಂಭೀರತೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಅಮೆರಿಕದ ಜಾನ್ ಹಾಪ್ಕಿನ್ಸ್ ಬ್ಲೂಮ್ಬರ್ಗ್ ಸಾರ್ವಜನಿಕ ಆರೋಗ್ಯ ಶಾಲೆಯ ಸಂಶೋಧಕ ರೋಡ್ರಿಗಸ್-ಬರ್ರಕ್ಕೆರ್ ತಿಳಿಸಿದ್ದಾರೆ.
ಜನರಿಗೆ ತಮಗೆ ವೈರಸ್ ತಗುಲಿದೆ ಎಂದೇ ಗೊತ್ತಾಗುವುದಿಲ್ಲ. ಪರೀಕ್ಷೆಗೆ ಒಳಗಾದವರಲ್ಲಿ ಡೆಂಗ್ಯು ಜ್ವರ ಬಂದಿದಿಯೇ ನಿಮಗೆ ಎಂದು ಕೇಳಿದಾಗ ಕೇವಲ ಶೇಕಡಾ 1ರಷ್ಟು ಮಂದಿ ಮಾತ್ರ ಹೌದು ಎಂದು ಒಪ್ಪಿಕೊಂಡಿದ್ದಾರೆ. ಆದರೆ ಶೇಕಡಾ 93ರಷ್ಟು ಜನರಿಗೆ ವೈರಸ್ ಹರಡಿತ್ತು ಅವರ ಪರಿವೆಗೆ ಬಂದಿರಲಿಲ್ಲ ಎಂದು ರೋಡ್ರಿಗಸ್ ತಿಳಿಸಿದ್ದಾರೆ.
ಪ್ರತಿವರ್ಷ ಈ ಪ್ರಮಾಣ ಹೆಚ್ಚಾಗುತ್ತಿದ್ದು, ಬಡಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಡೆಂಗ್ಯು, ಚಿಕುನ್ ಗುನ್ಯಾ ಹೆಚ್ಚಾಗಿ ಕಾಡುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


