ದೇಶ

ಪಾಕಿಸ್ತಾನ ತನ್ನದೇ ಪತ್ತೇದಾರಿ ಡ್ರೋನ್ ಹೊಡೆದುರುಳಿಸಿತೇ?

ಭಾರತದ ಪತ್ತೇದಾರಿ ಡ್ರೋನ್ ಹೊಡೆದುರುಳಿಸಿದ್ದಾಗಿ ಹೇಳಿರುವ ಪಾಕಿಸ್ತಾನದ ಆರೋಪವನ್ನು ಭಾರತ ತಳ್ಳಿಹಾಕಿದೆ. ಮತ್ತೊಂದೆಡೆ ತನ್ನದೇ ಡ್ರೋನ್ ನನ್ನು ಪಾಕಿಸ್ತಾನ...

ಪಾಕಿಸ್ತಾನ ತನ್ನದೇ ಪತ್ತೇದಾರಿ ಡ್ರೋನ್ ಹೊಡೆದುರುಳಿಸಿತೇ?
ಡ್ರೋನ್
Published On :

ನವದೆಹಲಿ: ಭಾರತದ ಪತ್ತೇದಾರಿ ಡ್ರೋನ್ ಹೊಡೆದುರುಳಿಸಿದ್ದಾಗಿ ಹೇಳಿರುವ ಪಾಕಿಸ್ತಾನದ ಆರೋಪವನ್ನು ಭಾರತ ತಳ್ಳಿಹಾಕಿದೆ. ಮತ್ತೊಂದೆಡೆ ತನ್ನದೇ ಡ್ರೋನ್ ನನ್ನು ಪಾಕಿಸ್ತಾನ ಹೊಡೆದುರುಳಿಸಿ ಭಾರತದ ಮೇಲೆ ಗೂಬೆ ಕೂರಿಸುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.

ಬುಧವಾರ ಹೊಡೆದುರುಳಿಸಿರುವ ಡ್ರೋನ್ ರೀತಿಯದ್ದೆ ಬೇಹುಗಾರಿಕೆ ಡ್ರೋನ್ ನನ್ನು ಪಾಕಿಸ್ತಾನ ನಿರ್ವಹಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.  ಪಾಕ್ ಗಡಿಯಲ್ಲಿ ಭಾರತದ ಡ್ರೋನ್ ಸಂಚಸಿದೆ ಎಂದು ಆರೋಪಿಸಿರುವ ಪಾಕ್ ಭಾರತದ ರಾಯಭಾರಿ ಕಚೇರಿ ಅಧಿಕಾರಿಯನ್ನು ಕರೆಸಿಕೊಂಡು ಭಾರತ ವಾಯುಪ್ರದೇಶ ಉಲ್ಲಂಘನೆಗಳಲ್ಲಿ ಎರಡು ಒಪ್ಪಂದಗಳನ್ನು ಉಲ್ಲಂಘಿಸಿದೆ ಎಂದು ದೂರು ನೀಡಿದೆ.

ಉಭಯ ರಾಷ್ಟ್ರಗಳು ಬಳಸುವ ಡ್ರೋನ್‌ಗಳ ವಿನ್ಯಾಸದಲ್ಲಿ ಬದಲಾವಣೆಯಿದ್ದು, ಪಾಕಿಸ್ತಾನ ತನ್ನ ದೇಶಕ್ಕೆ ಸೇರಿದ ಡ್ರೋನ್ ವಿಮಾನವನ್ನು ಹೊಡೆದುರುಳಿ ಭಾರತದ ಮೇಲೆ ಗೂಬೆ ಕೂರಿಸುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಪಾಕಿಸ್ತಾನದ ಆಕ್ರಮಿತ ಕಾಶ್ಮೀರದಲ್ಲಿ ನಿಯಂತ್ರಣ ರೇಖೆಯ ಬಳಿಕ ಬಿಂಬರ್‌ನಲ್ಲಿ ಡ್ರೋನ್‌ಗೆ ಗುಂಡಿಟ್ಟು ಉರುಳಿಸಿರುವುದಾಗಿ ಪಾಕಿಸ್ತಾನ ವಾದಿಸುತ್ತಿದೆ. ಈ ಡ್ರೋನ್ ವಿಮಾನವನ್ನು ಪ್ರದೇಶದ ಚಿತ್ರಣಕ್ಕಾಗಿ ಬಳಸಲಾಗುತ್ತಿತ್ತು ಎಂದು ಪಾಕಿಸ್ತಾನ ತಿಳಿಸಿದೆ.

ಪಾಕಿಸ್ತಾನ ಮಿಲಿಟರಿ ಪೂರೈಸಿರುವ ಡ್ರೋನ್ ಚಿತ್ರವು ಚೀನಾ ನಿರ್ಮಿತ ಡಿಜೆಐ ಫಾಂಡಮ್ 3. ಈ ಮಾದರಿಯನ್ನು ವಾಣಿಜ್ಯೋದ್ದೇಶಕ್ಕಾಗಿ ಪ್ರದೇಶದ ಚಿತ್ರೀಕರಣಕ್ಕೆ ಬಳಸಲಾಗುತ್ತದೆ ಮತ್ತು ಯಾವುದೇ ಗುಪ್ತ ಮಿಲಿಟರಿ ತಂತ್ರಜ್ಞಾನ ಹೊಂದಿಲ್ಲ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.