ಲಂಡನ್-ದೆಹಲಿ ನಡುವೆ ಬೋಯಿಂಗ್
ಬೋಯಿಂಗ್ 787-900 ವಿಮಾನ ಹಾರಾಟವನ್ನು ಅ.25ರಿಂದ ಆರಂಭಿಸಲಾಗುವುದು ಎಂದು ಬ್ರಿಟಿಷ್ ಏರ್‍ವೇಸ್ ಸೋಮವಾರ...

ನವದೆಹಲಿ: ಬೋಯಿಂಗ್ 787-900 ವಿಮಾನ ಹಾರಾಟವನ್ನು ಅ.25ರಿಂದ ಆರಂಭಿಸಲಾಗುವುದು ಎಂದು ಬ್ರಿಟಿಷ್ ಏರ್‍ವೇಸ್ ಸೋಮವಾರ ಹೇಳಿದೆ. ಬ್ರಿಟೀಷ್ ಏರ್‍ವೇಸ್ ಭಾರತದಲ್ಲಿ ಬೋಯಿಂಗ್ ಹಾರಾಟ ಆರಂಭಿಸಿದ ಮೊದಲ ಕಂಪನಿಯಾಗಿದೆ.
ನವೆಂಬರ್‍ನಲ್ಲಿ ಏರ್‍ಕೆನಡಾ ಸಹ ಈ ವಿಮಾನ ಹಾರಾಟ ಆರಂಭಿಸಲಿದ್ದು ಎರಡನೇ ಕಂಪನಿಯಾಗಲಿದೆ. ಈ ಹೊಸ ವಿಮಾನ 216 ಆಸನಗಳನ್ನು ಹೊಂದಿದೆ. ಐಷಾರಾಮಿ ಪ್ರಥಮ ದರ್ಜೆ ಹೊಂದಿದೆ. ಅಮೆರಿಕದ ನಂತರ ಭಾರತ ನಮಗೆ ಅತಿದೊಡ್ಡ ಮಾರುಕಟ್ಟೆಯಾಗಿದೆ.
ನಮ್ಮ ಜಾಗತಿಕ ಕಾರ್ಯಾಚರಣೆ ಯೋಜನೆಯಲ್ಲಿ ದೆಹಲಿ- ಲಂಡನ್ ಮಾರ್ಗ ಮೊದಲನೆಯದಾಗಿದೆ ಎಂದು ಬ್ರಿಟಿಷ್ ಏರ್‍ವೇಸ್‍ನ ದಕ್ಷಿಣ ಏಷ್ಯಾ ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಮೋರನ್ ಬರ್ಗೇರ್ ಹೇಳಿದ್ದಾರೆ. ಅ.25ರಿಂದ ಡಿ.31ರವರೆಗೆ ಸಾಮಾನ್ಯ ದರ್ಜೆ ಪ್ರಯಾಣಿಕರಿಗೆ ಶೇ.50ರಷ್ಟು ವಿನಾಯಿತಿ ನೀಡಲಾಗಿದೆ ಎಂತಲೂ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


