ಶ್ರೀಲಂಕಾ ರಾಜವಂಶದ ಕುಡಿಗಳು ಬೆಂಗಳೂರಲ್ಲಿ!
ಶ್ರೀಲಂಕಾ ಅರಸ ವಿಕ್ರಮರಾಜಸಿಂಗ ಅವರ ವಂಶಸ್ಥರು ಬೆಂಗಳೂರಿನಲ್ಲಿದ್ದು ತಮ್ಮ ಪೂರ್ವಿಕರ ವಿಚಾರ ಅರಿಯಲು ಶ್ರೀಲಂಕಾಗೆ ತೆರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಶ್ರೀಲಂಕಾ ಅರಸ ವಿಕ್ರಮರಾಜಸಿಂಗ ಅವರ ವಂಶಸ್ಥರು ಬೆಂಗಳೂರಿನಲ್ಲಿದ್ದು ತಮ್ಮ ಪೂರ್ವಿಕರ ವಿಚಾರ ಅರಿಯಲು ಶ್ರೀಲಂಕಾಗೆ ತೆರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಪತ್ರಿಕೆಯೊಂದರಲ್ಲಿ ಪ್ರಕಟವಾದ ಶ್ರೀಲಂಕಾ ರಾಜ ವಂಶದ ಕುಡಿ ಕೂಲಿಯಾಗಿ ಸತ್ತ ವರದಿ ಗಮನಿಸಿರುವ ಗಿರಿರಾಜ ಸಿಂಗ ಎಂಬುವವರು ತಾವು ವಿಕ್ರಮರಾಜಸಂಗ ಅವರ ಮರಿ ಮಕ್ಕಳಾಗಿದ್ದು ಆಂಧ್ರದ ಚಿತ್ತೂರಿನಲ್ಲಿ ಮೃತಪಟ್ಟಿರುವುದು ತಮ್ಮ ಸೋದರಮಾವ. ಚಿತ್ತೂರಿನಲ್ಲಿ ಮೃತಪಟ್ಟ ವ್ಯಕ್ತಿ ಹೆಸರು ಮೋಹನ್ ಬಾಬು ಆಗಿದ್ದು ಕಾರಣಾಂತರಗಳಿಂದ ತಾವು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆದಷ್ಟು ಶೀಘ್ರ ತಾವು ಶ್ರೀಲಂಕಾಗೆ ತೆರಳಿ ಅಲ್ಲಿ ನಮ್ಮ ಪೂರ್ವಿಕರ ಅಷ್ಟೂ ವಿಚಾರಗಳ ಕುರಿತು ಸಂಶೋಧನೆ ನಡೆಸುವುದಾಗಿ ತಿಳಿಸಿದ್ದಾರೆ.
ತಮ್ಮ ಮಗನಿಗೆ ವಿಕ್ರಮ ಎಂದು ಮುತ್ತಾತನ ಹೆಸರನ್ನೇ ಇಟ್ಟಿರುವ ಗಿರಿರಾಜ್ ಸಿಂಗ ಅವರು ತಮ್ಮ ಅಣ್ಣಂದಿರು ಮತ್ತು ಅಕ್ಕಂದಿರು ಇನ್ನೂ ಬೆಂಗಳೂರಿನಲ್ಲಿ ವಾಸವಿರುವುದಾಗಿ ತಿಳಿಸಿದ್ದಾರೆ.
ಕೊನೆಗೂ ನಡೆದ ಅಂತ್ಯಕ್ರಿಯೆ: ಅಪಸ್ಮಾರದಿಂದಾಗಿ ಬಿದ್ದು ಮೃಉತಪಟ್ಟಿದ್ದ ಮೋಹನ ರಾಜಸಿಂಗ ಅವರ ಅಂತ್ಯಕ್ರಿಯೆ ಅನಾಮಿಕರಿಂದಲೇ ನಡೆದಿದೆ. ಅವರು ಮೃತಪಟ್ಟು 2 ದಿನ ಕಳೆದರೂ ಸಂಬಂಧಿಕರು ಹಾಜರಾಗದಿದ್ದರಿಂದ ನರಸಿಂಗರಾಯಪೇಟೆ ಪೊಲೀಸರು ಅನಾಥ ಶವ ಎಂದು ಘೋಷಿಸಿ ಚಿತ್ತೂರಿನ ಮಾತೃ ಸೇವಾ ಸಂಸ್ಥೆ ಎಂಬ ಸ್ವಯಂ ಸೇವಾ ಸಂಸ್ಥೆಗೆ ಒಪ್ಪಿಸಿದ್ದು, ಅವರ ವಂಶದ ಬಗ್ಗೆ ತಿಳಿದಿದ್ದ ಸಂಸ್ಥೆಯವರು ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಿದ್ದಾರೆ. ಜಿಲ್ಲಾಸ್ಪತ್ರೆ ಪ್ರವೇಶ ದ್ವಾರದಿಂಡಲೇ ಪಟ್ಟಾಕಿ ಸಿಡಿಸಿ ತಮಟೆ ಭಾರಿಸುವ ಮೂಲಕ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಸ್ಮಶಾನಕ್ಕೆ ತಂದು ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


