ಠಾಣೆಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್‍ಗಳನ್ನು ಕೊಡಿ
ಕಸ್ಟಡಿಯಲ್ಲಿರುವ ಮಹಿಳಾ ಕೈದಿಗಳ ಆರೋಗ್ಯವನ್ನು ಗಮನದಲ್ಲಿ ಟ್ಟುಕೊಂಡು ಅವರಿಗೆ ಸ್ಯಾನಿಟರಿ ನ್ಯಾಪ್ಕಿನ್‍ಗಳನ್ನು ಒದಗಿಸಬೇಕು. ಮಹಿಳೆಯರ ವಿಚಾರಕ್ಕೆ ಸಂಬಂಧಿಸಿ ಸೂಕ್ಷ್ಮವಾಗಿರಬೇಕು ಎಂದು ವಿದ್ಯಾರ್ಥ...

ನವದೆಹಲಿ: ಕಸ್ಟಡಿಯಲ್ಲಿರುವ ಮಹಿಳಾ ಕೈದಿಗಳ ಆರೋಗ್ಯವನ್ನು ಗಮನದಲ್ಲಿ ಟ್ಟುಕೊಂಡು ಅವರಿಗೆ ಸ್ಯಾನಿಟರಿ ನ್ಯಾಪ್ಕಿನ್‍ಗಳನ್ನು ಒದಗಿಸಬೇಕು. ಮಹಿಳೆಯರ ವಿಚಾರಕ್ಕೆ ಸಂಬಂಧಿಸಿ ಸೂಕ್ಷ್ಮವಾಗಿರಬೇಕು ಎಂದು ವಿದ್ಯಾರ್ಥಿ ನಾಯಕಿಯೊಬ್ಬರು ದೆಹಲಿ ಪೊಲೀಸರಿಗೆ ಬರೆದ ಬಹಿರಂಗಪತ್ರದಲ್ಲಿ ಆಗ್ರಹಿಸಿದ್ದಾರೆ.
ದೆಹಲಿಯಲ್ಲಿ ಇತ್ತೀಚೆಗೆ ಬೀದಿಗಿಳಿದು ಪ್ರತಿಭಟನೆ ನಡೆಸುವ ಮಹಿಳೆಯ ಸಂಖ್ಯೆ ಹೆಚ್ಚಿದೆ. ಇದರಿಂದಾಗಿ ಅವರು ಕೆಲವೊಮ್ಮೆ ಬಂಧನಕ್ಕೂ ಒಳಗಾಗಬೇಕಾಗುತ್ತದೆ. ಈ ವೇಳೆ ಅವರ ಆರೋಗ್ಯವನ್ನು ಹಾಗೂ ಅವರ ಎದುರಿಸುವ ಸಮಸ್ಯೆಯನ್ನೂ ಪೊಲೀಸರು ಗಮನದಲ್ಲಿಟ್ಟುಕೊಳ್ಳಬೇಕು. ಅಗತ್ಯವಿದ್ದವರಿಗೆ ಠಾಣೆ ಯಲ್ಲೇ ಸ್ಯಾನಿಟರಿ ನ್ಯಾಪ್ಕಿನ್ ಸಿಗುವಂತೆ ವ್ಯವಸ್ಥೆ ಮಾಡಬೇಕು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಆ್ಯಂಜಲಿಕಾ ಅರಿಬಮ್ ಹೇಳಿದ್ದಾರೆ.
ದೇಶದ ಯಾವುದೇ ಠಾಣೆಯಲ್ಲಿ ಈ ಸೌಲಭ್ಯವಿಲ್ಲ. ಮಹಿಳೆಯರಿಗೆ ಯಾವುದೇ ಕ್ಷಣದಲ್ಲಾದರೂ ಮುಟ್ಟಾಗಬಹುದು. ಮಂದಿರ್ ಮಾರ್ಗ್ ಠಾಣೆ ಕಸ್ಟಡಿಯಲ್ಲಿದ್ದಾಗ ನಾನೂ ಇದೇ ರೀತಿಯ ಸಮಸ್ಯೆಗೆ ಒಳಗಾಗಿದ್ದೆ. ನನ್ನ ಗೆಳತಿಯರೂ ಇದೇ ರೀತಿಯ ಸಮಸ್ಯೆ ಎದುರಿಸಿದ್ದರು. ಯಾವುದೇ ಮಹಿಳೆಯನ್ನು ಆರು ಗಂಟೆಗಿಂತ ಹೆಚ್ಚಿನ ಅವಧಿಗೆ ಕಸ್ಟಡಿ ಯಲ್ಲಿ ಇಟ್ಟುಕೊಂಡರೆ ಠಾಣೆಯಲ್ಲೂ ನ್ಯಾಪ್ಕಿನ್ ಇರುವಂತೆ ನೋಡಿಕೊಳ್ಳುವುದು ಅತ್ಯಗತ್ಯ. ಇಲ್ಲವಾದರೆ ಮಹಿಳೆಯರು ಸೋಂಕಿಗೆ ತುತ್ತಾಗುವ ಪರಿಸ್ಥಿತಿ ಎದುರಾಗುತ್ತದೆ ಎಂದು ಹೇಳಿದ್ದಾರೆ. ಜತೆಗೆ, ಎಲ್ಲ ಠಾಣೆಗಳಲ್ಲೂ ಮಹಿಳೆಯರ ಶೌಚಾಲಯವನ್ನು ಶುಚಿಯಾಗಿಡುವಂತೆಯೂ ಆ್ಯಂಜಲಿಕಾ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


