ಹ್ಯಾಕ್ ಆಗಿದೆ ಪ್ರತಿಷ್ಠಿತ ಇಸ್ರೋ ಸಂಸ್ಥೆಯ ವೆಬ್‌ಸೈಟ್
ಪ್ರತಿಷ್ಠಿತ ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ(ಇಸ್ರೋ)ಯ ವೆಬ್‌ಸೈಟ್ ನ್ನು ಹ್ಯಾಕ್ ಮಾಡಲಾಗಿದೆ...

ನವದೆಹಲಿ: ಪ್ರತಿಷ್ಠಿತ ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ(ಇಸ್ರೋ)ಯ ವೆಬ್‌ಸೈಟ್ ನ್ನು ಹ್ಯಾಕ್ ಮಾಡಲಾಗಿದೆ.
ಇಸ್ರೋದಿಂದ 2 ದಿನಗಳ ಹಿಂದೆ 5 ವಾಣಿಜ್ಯ ಬಳಕೆಯ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ವಾಣಿಜ್ಯ ಉದ್ದೇಶಿತ ಆ್ಯಂಟ್ರಿಕ್ಸ್ ವೆಬ್‌ಸೈಟ್‌ನ್ನು ಹ್ಯಾಕ್ ಮಾಡಲಾಗಿದ್ದು, ಇದರ ಹಿಂದೆ ಚೀನಾ ಹ್ಯಾಕರ್ ಗಳ ಕೈವಾಡವಿರುವುದಾಗಿ ಶಂಕಿಸಲಾಗಿದೆ.
ಕಳೆದ ಶುಕ್ರವಾರ ರಾತ್ರಿ ಸರಿಯಾಗಿ 9.58ಕ್ಕೆ ಬ್ರಿಟನ್ 5 ಉಪಗ್ರಹಗಳನ್ನು ಇಸ್ರೋ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಕಳುಹಿಸಿತ್ತು.
15 ಮಹಡಿಯ ಕಟ್ಟಡದಷ್ಟು ಎತ್ತರದ ರಾಕೆಟ್ 320 ಟನ್ ತೂಕವಿತ್ತು. ಈ ರಾಕೆಟ್ 1440 ಕೆಜಿ ತೂಕದ ಬ್ರಿಟಿಷ್ ಉಪಗ್ರಹಗಳನ್ನುಹೊತ್ತು ಸಾಗಿದ್ದು, ಇಷ್ಟೊಂದು ಭಾರದ ವಾಣಿಜ್ಯ ಉಡಾವಣೆ ಭಾರತದಲ್ಲಿ ಇದೇ ಮೊದಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


