ದೇಶ

ಅಧಿಕೃತ ಸಮನ್ಸ್ ಗಾಗಿ ಕಾಯುತ್ತಿದ್ದೇನೆ: ಇ.ಡಿ. ಬಗ್ಗೆ ಲಲಿತ್ ಅಪಹಾಸ್ಯ

ದೇಶದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಲಂಡನ್ನಲ್ಲಿದ್ದುಕೊಂಡೇ ಭಾರತದ ಜಾರಿ ನಿರ್ದೇಶನಾಲಯ(ಇ.ಡಿ.)ವನ್ನು ಅಪಹಾಸ್ಯ ಮಾಡಿದ್ದಾರೆ...

ಅಧಿಕೃತ ಸಮನ್ಸ್ ಗಾಗಿ  ಕಾಯುತ್ತಿದ್ದೇನೆ: ಇ.ಡಿ. ಬಗ್ಗೆ ಲಲಿತ್ ಅಪಹಾಸ್ಯ
ಲಲಿತ್ ಮೋದಿ
Published On :

ನವದೆಹಲಿ: ದೇಶದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಲಂಡನ್ನಲ್ಲಿದ್ದುಕೊಂಡೇ ಭಾರತದ ಜಾರಿ ನಿರ್ದೇಶನಾಲಯ(ಇ.ಡಿ.)ವನ್ನು ಅಪಹಾಸ್ಯ ಮಾಡಿದ್ದಾರೆ.

ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಮೋದಿ, ``ಜಾರಿ ನಿರ್ದೇಶನಾಲಯದ್ದೆನ್ನಲಾದ ನೋಟಿಸ್ಗಾಗಿ ನಾನು ಕಾಯುತ್ತಿದ್ದೇನೆ. ಲಂಡನ್ನಲ್ಲಿ ಅಧಿಕೃತವಾಗಿ ನನಗೆ ನೋಟಿಸ್ ಬರುತ್ತದೆಂದು ಭಾವಿಸಿದ್ದೇನೆ. ಆದರೆ ಈವರೆಗೂ ಅಂತಹ ಯಾವುದೇ ಇಮೇಲ್ ಬಂದಿಲ್ಲ'' ಎಂದಿದ್ದಾರೆ. ಇನ್ನೊಂದು ಟ್ವೀಟ್ನಲ್ಲಿ ಇ.ಡಿ. ವಿರುದ್ಧ ಹರಿಹಾಯ್ದಿರುವ ಲಲಿತ್, ``ಬ್ಲೂ ಕಾರ್ನರ್ ನೋಟಿಸ್, ಅದೂ ಇದು ಎಂದು ಕೇವಲ ಎಕ್ಸ್ವೈಝೆಡ್ ಎಂದು ಹೇಳುತ್ತಾ ಕೂರುವ ಬದಲು ಜಾರಿ ನಿರ್ದೇಶನಾಲಯವು ಸೂಕ್ತ ಕಾನೂನು ಪ್ರಕ್ರಿಯೆಯನ್ನು ಕೈಗೊಳ್ಳಲಿ.

ಇ.ಡಿ.ಗೆ ನಾನು ನೀಡುವ ಸಲಹೆಯೇನೆಂದರೆ, ಕಾನೂನು ಪ್ರಕಾರ ಮುಂದುವರಿಯಿರಿ, ಇಲ್ಲದಿದ್ದರೆ ಮತ್ತೊಮ್ಮೆ ಮುಖಕ್ಕೆ ಮೊಟ್ಟೆ ಬಿಸಾಕಿಕೊಳ್ಳಬೇಕಾಗುತ್ತದೆ'' ಎಂದಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.