ಅಳಿಯ ಧನುಷ್ ತಂದೆಯ ಸಾಲಕ್ಕೆ ನಾನು ಜಾಮೀನುದಾರ ಅಲ್ಲ: ರಜನಿಕಾಂತ್
ತಮಿಳು ಚಿತ್ರ ನಟ ರಜನಿಕಾಂತ್ ಅವರು ತಮ್ಮ ಅಳಿಯ ಧನುಷ್‌ರ ತಂದೆ ಕಸ್ತೂರಿ ರಾಜಾ ತೊಗೆದುಕೊಂಡಿರುವ ಸಾಲಕ್ಕೆ ನಾನು ಜಾಮೀನುದಾರ ಅಲ್ಲ ಎಂದು ಮದ್ರಾಸ್...

ಚೆನ್ನೈ: ತಮಿಳು ಚಿತ್ರ ನಟ ರಜನಿಕಾಂತ್ ಅವರು ತಮ್ಮ ಅಳಿಯ ಧನುಷ್‌ರ ತಂದೆ ಕಸ್ತೂರಿ ರಾಜಾ ತೊಗೆದುಕೊಂಡಿರುವ ಸಾಲಕ್ಕೆ ನಾನು ಜಾಮೀನುದಾರ ಅಲ್ಲ ಎಂದು ಮದ್ರಾಸ್ ಹೈಕೋರ್ಟ್‌ನಲ್ಲಿ ಲಿಖಿತ ಹೇಳಿಕೆ ದಾಖಲಿಸಿದ್ದಾರೆ.
ಫೈನಾನ್ಸಿಯರ್ ಮುಖನ್ಚಂದ್ರ ಬೋತ್ರಾ ಅವರು, 2012ರಲ್ಲಿ ಕಸ್ತೂರಿ ರಾಜಾ ಅವರು ತಮ್ಮ ಬಳಿ 65 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಒಂದು ವೇಳೆ ಈ ಸಾಲ ತೀರಿಸಲು ಸಾಧ್ಯವಾಗದಿದ್ದರೆ ಅದನ್ನು ರಜನಿಕಾಂತ್ ತೀರಿಸುತ್ತಾರೆ ಎಂದು ಫೈನಾನ್ಸಿಯರ್ ಆರೋಪಿಸಿ, ಮದ್ರಾಸ್ ಹೈಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿದ್ದರು.
ಈ ಸಂಬಂಧ ಮದ್ರಾಸ್ ಹೈಕೋರ್ಟ್ ಕಳೆದ ಜೂನ್ 22ರಂದು ರಜನಿಕಾಂತ್ ಮತ್ತು ಕಸ್ತೂರಿ ರಾಜಾ ಅವರಿಗೆ ನೋಟಿಸ್ ಜಾರಿ ಮಾಡಿತ್ತು.
ಕಸ್ತೂರಿ ರಾಜಾ ಅವರು ಸಾಲ ಪಡೆದಿರುವುದಾಗಿ ನನಗೆ ತಿಳಿದಿಲ್ಲ ನಾನು ಆ ಸಾಲಕ್ಕೆ ಹೊಣೆಗಾರನಲ್ಲ. ನನಗೂ ಫೈನಾನ್ಸಿಯರ್‌ಗೂ ಯಾವುದೇ ಸಂಬಂಧವಿಲ್ಲ ಎಂದು ರಜನಿಕಾಂತ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಕಸ್ತೂರಿ ರಾಜಾ ಅವರು ಸಾಲ ಪಡೆಯುವಾಗ ನನ್ನ ಹೆಸರನ್ನು ಬಳಕೆ ಮಾಡಿದಾಗ ಫೈನಾನ್ಸಿಯರ್ ನನಗೆ ಯಾಕೆ ಮಾಹಿತಿ ನೀಡಲಿಲ್ಲ ಎಂದು ಪ್ರಶ್ನಿಸಿರುವ ರಜನಿಕಾಂತ್, ನನ್ನ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಈ ಆರೋಪ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


