ದೇಶ

ಯೆಮೆನ್ ದಂಗೆ: ಉಗ್ರರ ದಾಳಿಗೆ 30 ಸೈನಿಕರು ಬಲಿ

ಯುದ್ಧ ಗ್ರಸ್ತ ಯೆಮೆನ್ ನಲ್ಲಿ ಮತ್ತೆ ಉಗ್ರರ ಉಪಟಳ ಪ್ರಾರಂಭವಾಗಿದ್ದು, ಇಂದು ನಡೆದ ಉಗ್ರರ ದಾಳಿಗೆ ಸುಮಾರು 30 ಕ್ಕೂ ಹೆಚ್ಚು ಯೆಮೆನ್ ಸೈನಿಕರು ಬಲಿಯಾಗಿರುವ ಘಟನೆ ಸೌದಿ ಅರೇಬಿಯಾದ ಮೆಕನೈಸ್ಡ್ ಬ್ರಿಗೇಡ್ ಪ್ರದೇಶದಲ್ಲಿ ಬುಧವಾರ ನಡೆದಿದೆ...

ಯೆಮೆನ್ ದಂಗೆ: ಉಗ್ರರ ದಾಳಿಗೆ 30 ಸೈನಿಕರು ಬಲಿ
ಯೆಮೆನ್ ದಂಗೆ: ಉಗ್ರರ ದಾಳಿಗೆ 30 ಸೈನಿಕರು ಬಲಿ (ಸಾಂದರ್ಭಿಕ ಚಿತ್ರ)
Published On :

ಆಡೆನ್: ಯುದ್ಧ ಗ್ರಸ್ಥ ಯೆಮೆನ್ ನಲ್ಲಿ ಮತ್ತೆ ಉಗ್ರರ ಉಪಟಳ ಪ್ರಾರಂಭವಾಗಿದ್ದು, ಇಂದು ನಡೆದ ಉಗ್ರರ ದಾಳಿಗೆ ಸುಮಾರು 30 ಕ್ಕೂ ಹೆಚ್ಚು ಯೆಮೆನ್ ಸೈನಿಕರು ಬಲಿಯಾಗಿರುವ ಘಟನೆ ಸೌದಿ ಅರೇಬಿಯಾದ ಮೆಕನೈಸ್ಡ್ ಬ್ರಿಗೇಡ್ ಪ್ರದೇಶದಲ್ಲಿ  ಬುಧವಾರ ನಡೆದಿದೆ.

ಸೌದಿ ಅರೇಬಿಯಾದ ಗಡಿ ಪ್ರದೇಶದಲ್ಲಿದ್ದ ಯೆಮೆನ್ ಸೈನಿಕರ ನೆಲೆ ಮೇಲೆ ಇದ್ದಕ್ಕಿದ್ದಂತೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಸ್ಥಳದಲ್ಲಿದ್ದ ಸುಮಾರು 30ಕ್ಕೂ ಹೆಚ್ಚು ಸೈನಿಕರು ಬಲಿಯಾಗಿದ್ದು, ಸೈನಿಕರ ವಾಹನ ಹಾಗೂ ಇನ್ನಿತರೆ ಶಸ್ತ್ರಾಸ್ತ್ರಗಳು ನಾಶವಾಗಿದೆ ಎಂದು ಹೇಳಲಾಗುತ್ತಿದೆ.

ಉಗ್ರರ ದಾಳಿಯಿಂದ ಈಗಾಗಲೇ ಹಲವು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಸ್ಥಳದಲ್ಲಿ ಶಾಂತ ವಾತಾವರಣ ನಿರ್ಮಾಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.