ದೇಶ

20 ರುಪಾಯಿ ಕದ್ದಿದ್ದನ್ನು ನೋಡಿದ 4 ವರ್ಷದ ಬಾಲಕಿಯನ್ನು ಕೊಂದ 15 ವರ್ಷದ ಬಾಲಕಿ

20 ರುಪಾಯಿ ಕಳ್ಳತನ ಮಾಡುತ್ತಿರುವುದನ್ನು ನೋಡಿದ ನಾಲ್ಕು ವರ್ಷದ ಬಾಲಕಿಯನ್ನು 15 ವರ್ಷದ ಬಾಲಕಿ ಕೊಲೆ ಮಾಡಿದ ಘಟನೆ...

20 ರುಪಾಯಿ ಕದ್ದಿದ್ದನ್ನು ನೋಡಿದ 4 ವರ್ಷದ ಬಾಲಕಿಯನ್ನು ಕೊಂದ 15 ವರ್ಷದ ಬಾಲಕಿ
ದುರ್ಗಾ
Published On :

ವಿಲ್ಲುಪುರಂ: 20 ರುಪಾಯಿ ಕಳ್ಳತನ ಮಾಡುತ್ತಿರುವುದನ್ನು ನೋಡಿದ ನಾಲ್ಕು ವರ್ಷದ ಬಾಲಕಿಯನ್ನು 15 ವರ್ಷದ ಬಾಲಕಿ ಕೊಲೆ ಮಾಡಿದ ಘಟನೆ ಮಂಗಳವಾರ ತಮಿಳುನಾಡಿನಲ್ಲಿ ನಡೆದಿದೆ.

ಮೂಲಗಳ ಪ್ರಕಾರ, ಕಲ್ಲಕುರಿಚಿಯ ವೆಂಕಟೇಶನ್ ಹಾಗೂ ಸಂತಾನ ಲಕ್ಷ್ಮಿ ಅವರ ಪುತ್ರಿ, ಎಲ್ಕೆಜಿ ವಿದ್ಯಾರ್ಥಿನಿ ದುರ್ಗಾ ಭಾನುವಾರ ಸಂಜೆ 10ನೇ ತರಗತಿ ವಿದ್ಯಾರ್ಥಿನಿ ಮೋಹನಾ(ಹೆಸರು ಬದಲಾಯಿಸಲಾಗಿದೆ)ರೊಂದಿಗೆ ತಮ್ಮ ಮನೆಯಲ್ಲೇ ಆಟವಾಡುತ್ತಿದ್ದರು. ಈ ವೇಳೆ ಮೋಹನಾ 20 ರುಪಾಯಿ ಕದಿಯುತ್ತಿರುವುದನ್ನು ದುರ್ಗಾ ನೋಡಿದ್ದಳು. ಅಲ್ಲದೆ ಇದನ್ನು ತನ್ನ ತಾಯಿಗೂ ಹೇಳಿದ್ದಳು.

ಬಳಿಕ ದುರ್ಗಾ ತಾಯಿ ಸಂತಾನ ಲಕ್ಷ್ಮಿ, ಮೋಹನಾಳಿಗೆ ಬೈದು, ಬುದ್ಧಿಹೇಳಿ ಹಣ ವಾಪಸ್ ತೆಗೆದುಕೊಂಡಿದ್ದರು. ಅಲ್ಲದೆ ಮೋಹನಾಳ ಅಪ್ಪ, ಅಮ್ಮನಿಗೂ ಈ ವಿಷಯ ತಿಳಿಸಿದ್ದರಿಂದ, ಅವರೂ ಮೋಹನಾಳಿಗೆ ಹೊಡೆದು ಬುದ್ಧಿ ಹೇಳಿದ್ದರು.

ಇದರಿಂದ ತೀವ್ರ ಕೋಪಗೊಂಡಿದ್ದ ಮೋಹನಾ ಸೋಮವಾರ ಶಾಲೆಯಿಂದ ಬಂದವಳೇ, ಆಟವಾಡುವ ನೆಪ ಹೇಳಿ ದುರ್ಗಾಗಳನ್ನು ಕರೆದುಕೊಂಡು ಹೋಗಿ, ಹೊಲದಲ್ಲಿರುವ ಬಾವಿಗೆ ತಳ್ಳಿದ್ದಾಳೆ.

ರಾತ್ರಿಯಾದರೂ ದುರ್ಗಾ ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು, ಮೋಹನಾಳನ್ನು ವಿಚಾರಿಸಿದ್ದಾರೆ. ಆದರೆ ವಿಷಯ ಬಾಯಿಬಿಡದ ಮೋಹನಾ, 7 ಗಂಟೆಗೆ ನಿಮ್ಮ ಮಗಳನ್ನು ಕರೆತಂದು ಮನೆಯಲ್ಲಿ ಬಿಟ್ಟಿದ್ದೇನೆ ಎಂದಿದ್ದಾಳೆ.

ಪೋಷಕರು ಇಡೀ ರಾತ್ರಿ ದುರ್ಗಾಗಳಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೆ ಬಾವಿಯಲ್ಲಿ ದುರ್ಗಾಗಳ ಶವ ಪತ್ತೆಯಾಗಿದ್ದು, ಈ ಸಂಬಂಧ ಕಚಿರಪಲಯಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ ಮೋಹನಾಳ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಮೋಹನಾಳನ್ನು ವಶಕ್ಕೆ ಪಡೆದ ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆ ವೇಳೆ ಮೋಹನಾ, ದುರ್ಗಾಗಳನ್ನು ಬಾವಿಗೆ ತಳ್ಳಿ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.