ಸೆನ್ಸಾರ್ ಮಂಡಳಿಗೆ ಸಿಎಜಿ ಚಾಟಿ
2012ರಿಂದ 2015ರ ಅವಧಿಯಲ್ಲಿ ಸೆನ್ಸಾರ್ ನಿಯಮಗಳನ್ನೆಲ್ಲ ಗಾಳಿಗೆ ತೂರಿ, ಎ ಸರ್ಟಿಫಿಕೇಟ್ ಸಿಗಬೇಕಿದ್ದ 172 ಚಿತ್ರಗಳಿಗೆ ಯುಎ ಪ್ರಮಾಣಪತ್ರ...

ಮುಂಬೈ: 2012ರಿಂದ 2015ರ ಅವಧಿಯಲ್ಲಿ ಸೆನ್ಸಾರ್ ನಿಯಮಗಳನ್ನೆಲ್ಲ ಗಾಳಿಗೆ ತೂರಿ, ಎ ಸರ್ಟಿಫಿಕೇಟ್ ಸಿಗಬೇಕಿದ್ದ 172 ಚಿತ್ರಗಳಿಗೆ ಯುಎ ಪ್ರಮಾಣಪತ್ರ ಹಾಗೂ ಯುಎ ಪ್ರಮಾಣಪತ್ರ ಲಭಿಸಬೇಕಿದ್ದ 166 ಚಿತ್ರಗಳಿಗೆ ಯು ಸರ್ಟಿಫಿಕೇಟ್ ನೀಡಿರುವ ಸೆನ್ಸಾರ್ ಮಂಡಳಿಯನ್ನು ಸಿಎಜಿ ತನ್ನ ವರದಿಯಲ್ಲಿ ತೀವ್ರತರಾಟೆಗೆ ತೆಗೆದುಕೊಂಡಿದೆ. ಮಾಹಿತಿ ಹಕ್ಕು ಕಾಯ್ದೆ ಅರ್ಜಿ ವಿಚಾರಣೆ ಮೂಲಕ ಈ ವಿಷಯ ಬಹಿರಂಗವಾಗಿದೆ. ಸಿಬಿಎಫ್ ಸಿ(ಸೆನ್ಸಾರ್ ಮಂಡಳಿ) ಸಿನಿಮಾಗಳನ್ನು ಪ್ರಮಾಣೀಕರಿಸುವುದರಲ್ಲಿ ಪಕ್ಷಪಾತ ಧೋರಣೆಯನ್ನೂ ಅನುಸರಿಸುತ್ತಿದೆ ಎಂದು ಸಿಎಜಿ ವರದಿಯಲ್ಲಿ ದೋಷಾರೋಪಣೆ ಮಾಡಿದೆ. ವಿಹಾರ್ ದುರ್ವೆ ಎಂಬುವವರು ಸಲ್ಲಿಸಿದ್ದ ಆರ್‍ಟಿಐ ಅರ್ಜಿಗೆ 70 ಪುಟಗಳ ಉತ್ತರ ನೀಡಿರುವ ಸಿಎಜಿ ಎರಡು ಚಿತ್ರಗಳ ಸರ್ಟಿಫಿಕೇಟ್‍ನಲ್ಲಿ ಪ್ರಮಾಣೀಕರಿಸಿದವರ ಸಹಿಯಲ್ಲಿಯೂ ವ್ಯತ್ಯಯ ಕಂಡುಬಂದಿದೆ ಎಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


