ಅಜ್ಮೇರ್ ಸ್ಫೋಟ ಸಾಕ್ಷಿಗಳೂ ಉಲ್ಟಾ!
ಅಜ್ಮೇರ್ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆಯಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ಹಿನ್ನಡೆಯಾಗಿದ್ದು, 13 ಸಾಕ್ಷಿಗಳೂ ಪ್ರತಿಕೂಲವಾಗಿ ಪರಿಣಮಿಸಿವೆ...

ಜೈಪುರ/ನವದೆಹಲಿ: ಅಜ್ಮೇರ್ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆಯಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ಹಿನ್ನಡೆಯಾಗಿದ್ದು, 13 ಸಾಕ್ಷಿಗಳೂ ಪ್ರತಿಕೂಲವಾಗಿ ಪರಿಣಮಿಸಿವೆ. 2007ರ ಅಕ್ಟೋಬರ್‍ನಲ್ಲಿ ನಡೆದಿದ್ದ ಅಜ್ಮೇರ್ ಸ್ಫೋಟದಲ್ಲಿ ಮೂವರು ಮೃತಪಟ್ಟು ಹಲವರು ಗಾಯಗೊಂಡಿದ್ದರು.
ಆರಂಭದಲ್ಲಿ ರಾಜಸ್ಥಾನದ ಉಗ್ರ ನಿಗ್ರಹ ಪಡೆ ತನಿಖೆ ಕೈಗೆತ್ತಿಕೊಂಡಿತ್ತಾದರೂ, ನಂತರದಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‍ಐಎ) ಪ್ರಕರಣ ವರ್ಗಾವಣೆ-ಗೊಂಡಿತ್ತು. ಆರ್‍ಎಸ್ ಎಸ್‍ನ ಮಾಜಿ ಕಾರ್ಯಕರ್ತರು ಮತ್ತು ಹಿಂದೂ ಮೂಲಭೂತವಾದಿಗಳು ಎನ್ನಲಾದ 12 ಜನರ ವಿರುದಟಛಿ ಎನ್‍ಐಎ ದೋಷಾರೋಪಪಟ್ಟಿ ಸಲ್ಲಿಸಿತ್ತು.
`` ಈ ಇಡೀ ಪ್ರಕರಣ ಈ ಸಾಕ್ಷಿಗಳ ಮೇಲೆ ನಿಂತಿದೆ. ಎಲ್ಲರೂ ಮ್ಯಾಜಿಸ್ಟ್ರೇಟ್ ಎದುರು ಸಾಕ್ಷಿ ನುಡಿದಿದ್ದರು. ಅದರೆ, ಈಗ ಪ್ರತಿಕೂಲ ಹೇಳಿಕೆ ನೀಡು- ತ್ತಿದ್ದಾರೆ,'' ಅಜ್ಮೇರ್ ಸ್ಫೋಟ ಪ್ರಕರಣದ ಸಹಾಯಕ ಸಾರ್ವಜನಿಕ ಅಭಿಯೋಜಕಿ ಆಶ್ವಿನಿ ಶರ್ಮಾ ಹೇಳಿದ್ದಾರೆ. ``ಎನ್ಐಎಯಿಂದ ಯಾವುದೇ ಒತ್ತಡ ಇಲ್ಲ,'' ಎಂದು ಆರಂಭದಲ್ಲಿ ಹೇಳಿದ್ದ ಸಾಕ್ಷಿಗಳು, 2014ರಿಂದ ಈಚೆಗೆ ಪ್ರತಿಕೂಲ ಹೇಳಿಕೆ ನೀಡಲು ಆರಂಬಿsಸಿದ್ದಾರೆ. 2015ರ ಮೇ ತಿಂಗಳಿಂದಾಚೆಗೆ ಎಲ್ಲರೂ ವ್ಯತಿರಿಕ್ತ ಸಾಕ್ಷಿ ನುಡಿದಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


