ಲಲಿತ್ ಮೋದಿ ವಿರುದ್ಧ ದೂರು ಸಲ್ಲಿಸಿದ ರಾಷ್ಟ್ರಪತಿಭವನ
ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ವಿರುದ್ಧ ರಾಷ್ಟ್ರಪತಿಭವನ ದೆಹಲಿ ಪೊಲೀಸರಿಗೆ ದೂರು ನೀಡಿದೆ. ರಾಷ್ಟ್ರಪತಿಯವರ ಸೆಕ್ರೆಟರಿ ಒಮಿತಾ ಪೌಲ್‌ಗೆ...

ನವದೆಹಲಿ: ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ವಿರುದ್ಧ ರಾಷ್ಟ್ರಪತಿಭವನ ದೆಹಲಿ ಪೊಲೀಸರಿಗೆ ದೂರು ನೀಡಿದೆ. ರಾಷ್ಟ್ರಪತಿಯವರ ಸೆಕ್ರೆಟರಿ ಒಮಿತಾ ಪೌಲ್‌ಗೆ ಹವಾಲಾ ಮಧ್ಯವರ್ತಿ ನಾಗ್‌ಪಾಲ್ ಜತೆ ಸಂಪರ್ಕವಿಗೆ ಎಂದು ಲಲಿತ್ ಮೋದಿ ಟ್ವೀಟ್ ಮಾಡಿದ್ದರು. ಈ ಆರೋಪವನ್ನು ಖಂಡಿಸಿ ರಾಷ್ಟ್ರಪತಿ ಭವನ ದೂರ ನೀಡಿದೆ. ಜೂನ್ 23ರಂದು ಒಮಿತಾ ಪೌಲ್ ವಿರುದ್ಧ ಲಲಿತ್ ಮೋದಿ ಆರೋಪ ಮಾಡಿದ್ದರು. ಲಲಿತ್ ಮೋದಿಯವರ ಟ್ವೀಟ್‌ನ ಪ್ರತಿಯನ್ನೂ ದೂರಿನೊಂದಿಗೆ ಸಲ್ಲಿಸಲಾಗಿದೆ.
ಲಲಿತ್ ಮೋದಿಯವರ ಈ ಆರೋಪದ ಬಗ್ಗೆ ತಕ್ಕ ಕ್ರಮಕೈಗೊಳ್ಳಬೇಕೆಂದು ರಾಷ್ಟ್ರಪತಿ ಭವನದ ಅಧಿಕಾರಿಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದಾಗ್ಯೂ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ರಾಷ್ಟ್ರಪತಿಭವನ ಮುಂದಾಗಲಿಲ್ಲ.
ಲಲಿತ್ ಮೋದಿಯವರ ಆರೋಪ ಸತ್ಯಕ್ಕೆ ದೂರವಾದುದು ಎಂದು ರಾಷ್ಟ್ರಪತಿಭವನದ ಅಧಿಕಾರಿಗಳು ಹೇಳಿದ್ದಾರೆ. ಅದೇ ವೇಳೆ ದೂರು ಸ್ವೀಕೃತಗೊಂಡಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


