ದಾವೂದ್ ನನ್ನು ಕರೆ ತರುವ ವಿಚಾರ; ಬಾಯಿ ಮಾತಿಗಿಂತ, ಕೃತಿ ಮುಖ್ಯ: ಸಾಧ್ವಿ
ಭೂಗತ ಪಾತಕಿ ದಾವೂದ್ ಇಬ್ರಾಹೀಂನನ್ನು ಭಾರತಕ್ಕೆ ವಾಪಸ್ ಕರೆ ತರುವ ವಿಚಾರ ಮಾತನಾಡುವುದಲ್ಲ, ಮಾಡುವ ವಿಚಾರ ಎಂದು ಕೇಂದ್ರ...

ಅಹಮದಾಬಾದ್: ಭೂಗತ ಪಾತಕಿ ದಾವೂದ್ ಇಬ್ರಾಹೀಂನನ್ನು ಭಾರತಕ್ಕೆ ವಾಪಸ್ ಕರೆ ತರುವ ವಿಚಾರ ಮಾತನಾಡುವುದಲ್ಲ, ಮಾಡುವ ವಿಚಾರ ಎಂದು ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ತಿಳಿಸಿದ್ದಾರೆ.
ದಾವೂದ್ ನನ್ನು ಹಿಡಿಯಲಾಗದು ಎಂದು ದಾವೂದ್ ನ ಆಪ್ತ ಚೋಟಾ ಶಕೀಲ್ ಹೇಳಿಕೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಾಧ್ವಿ ಅವರು, ದಾವೂದ್ ಕುರಿತಂತೆ ಸಾಕಷ್ಟು ಮಾತನಾಡಿದ್ದು ಆಗಿದೆ ಮುಂದೇನಿದ್ದರು ಮಾಡುವ ವಿಚಾರ ಮಾತನಾಡುವುದಲ್ಲ ಎಂದು ಹೇಳಿದ್ದಾರೆ.
ದಾವೂದ್ ಶರಣಾಗಲು ಬಯಸಿದ್ದ ಎಂಬ ವಿಚಾರವನ್ನು ಖ್ಯಾತ ಹಿರಿಯ ವಕೀಲ ರಾಂ ಜೇಠ್ಮಲಾನಿ ಅವರು ಹೇಳಿದ್ದರು. ಆದರೆ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಶರದ್ ಪವಾರ್ ಅವರು ಅದಕ್ಕೆ ಒಪ್ಪಿರಲಿಲ್ಲ ಎಂದೂ ಅವರು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪವಾರ್, ‘ಆತನ ಶರಣಾಗತಿ ವಿಚಾರವನ್ನು ಜೇಠ್ಮಲಾನಿ ಅವರು ಹೇಳಿದ್ದರು. ಆದರೆ, ಆತನ ಷರತ್ತುಗಳು ಮನ್ನಿಸಲು ಸಾಧ್ಯವಿರಲಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


