ಬೆಳಗಾವಿಯಲ್ಲಿ ನಕಲಿ ವಿವಿ
ಕರ್ನಾಟಕದ ಬೆಳಗಾವಿಯ ಬಡಗಗ್ನಾವಿ ಸರ್ಕಾರ್ ವರ್ಲ್ಡ್ ಓಪನ್ ಎಜುಕೇಷನ್ ಸೊಸೈಟಿ ಸೇರಿ ದೇಶದ ಒಟ್ಟು 21 ನಕಲಿ ವಿವಿಗಳ ಪಟ್ಟಿಯನ್ನು ಯುಜಿಸಿ ಬಿಡುಗಡೆ ಮಾಡಿದೆ...

ನವದೆಹಲಿ: ಕರ್ನಾಟಕದ ಬೆಳಗಾವಿಯ ಬಡಗಗ್ನಾವಿ ಸರ್ಕಾರ್ ವರ್ಲ್ಡ್ ಓಪನ್ ಎಜುಕೇಷನ್ ಸೊಸೈಟಿ ಸೇರಿ ದೇಶದ ಒಟ್ಟು 21 ನಕಲಿ ವಿವಿಗಳ ಪಟ್ಟಿಯನ್ನು ಯುಜಿಸಿ ಬಿಡುಗಡೆ ಮಾಡಿದೆ.
ವಿದ್ಯಾರ್ಥಿಗಳು ಈ ನಕಲಿ ವಿವಿಗಳಿಗೆ ಪ್ರವೇಶ ಪಡೆದು ಮೋಸ ಹೋಗಕೂಡದೆಂದು ಎಚ್ಚರಿಕೆ ನೀಡಿ ಬುಧವಾರ ಅಧಿಸೂಚನೆ ಹೊರಡಿಸಿದೆ. ಈ ಕಳಂಕಿತ ಪಟ್ಟಿಯಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನ ಹೊಂದಿದ್ದು, ಅಲ್ಲಿನ ಒಟ್ಟು 8 ವಿವಿಗಳು ಕಪ್ಪು ಪಟ್ಟಿಯಲ್ಲಿವೆ. ದೆಹಲಿಯ ಆರು ಯುನಿವರ್ಸಿಟಿಗಳು ನಕಲಿ ಎಂದು ಗುರುತಿಸಲಾಗಿದೆ. ಮಿಕ್ಕಂತೆ ತಮಿಳುನಾಡು, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಬಿಹಾರ, ಕರ್ನಾಟಕ ಹಾಗೂ ಪಶ್ಚಿಮ ಬಂಗಾಳದ ಒಂದೊಂದು ಯುನಿವರ್ಸಿಟಿಗಳು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.
ಈ ಅಧಿಸೂಚನೆಯ ನಂತರವೂ ವಿದ್ಯಾರ್ಥಿಗಳು ಈ ವಿವಿಗಳಲ್ಲಿ ಪ್ರವೇಶ ಪಡೆದಲ್ಲಿ, ಅವರಿಗೆ ಪದವಿ ಪ್ರಮಾಣಪತ್ರ ನೀಡಲಾಗುವುದಿಲ್ಲ. ಅವರಿಗೆ ಸಿಗುವ ಪದವಿಗೆ ಮಾನ್ಯತೆಯೂ ಇರುವುದಿಲ್ಲ ಎಂದು ಯುಜಿಸಿ ಎಚ್ಚರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


