ಅಗ್ನಿ-5 ಕ್ಷಿಪಣಿ ಪರೀಕ್ಷಾ ಉಡಾವಣೆ ಯಶಸ್ವಿ
ಡಿಆರ್‌ಡಿಓ ನಿರ್ಮಿತ ಅಗ್ನಿ 5 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಅಗ್ನಿ ಕ್ಷಿಪಣಿಯು ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಬೆಂಗಳೂರು: ಡಿಆರ್‌ಡಿಓ ನಿರ್ಮಿತ ಅಗ್ನಿ 5 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಅಗ್ನಿ ಕ್ಷಿಪಣಿಯು ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮಹತ್ವಾಕಾಂಕ್ಷಿಯ ಭೂಮಿಯ ಮೇಲ್ಮೈನಿಂದ ಮೇಲ್ಮೈಗೆ ಜಿಗಿಯುವ ಖಂಡಾಂತರ ಕ್ಷಿಪಣಿ (ಐಸಿಬಿಎಂ) ಅಗ್ನಿ-5 ಕ್ಷಿಪಣಿ ಪರೀಕ್ಷೆಯನ್ನು ಒಡಿಶಾ ಕರಾವಳಿಯ ವ್ಹೀಲರ್ ಐಲ್ಯಾಂಡ್‌ನಿಂದ ಇಂದು ಬೆಳಗ್ಗೆ ನಡೆಸಲಾಯಿತು. ಘನ ಇಂಧನ ಬಳಸಿ ಚಾಲನೆಗೊಳ್ಳುವ ಅಗ್ನಿ-5 ಕ್ಷಿಪಣಿಯನ್ನು ಇದೇ ಪ್ರಥಮ ಬಾರಿಗೆ ಕ್ಯಾನಿಸ್ಟರ್ ಮೂಲಕ ಉಡಾವಣೆ ಮಾಡಲಾಗಿದೆ.
ಅಗ್ನಿ -5 ಕ್ಷೀಪಣಿಯು 5,500 ಕಿಲೋ ಮೀಟರ್‌ಗಿಂತಲೂ ದೂರಕ್ಕೆ 1 ಟನ್ ಅಣ್ವಸ್ತ್ರ ಸಿಡಿತಲೆಯೊಂದಿಗೆ ಸಾಗುವ ಸಾಮರ್ಥ್ಯ ಹೊಂದಿದೆ. ಇಂದು ನಡೆದಿರುವ ಈ ಪರೀಕ್ಷೆಯು ಭಾರತದ ದೂರಗಾಮಿ ಕ್ಷಿಪಣಿ ಪ್ರಯೋಗದಲ್ಲಿ ಮೂರನೇ ಯಶಸ್ವೀ ಪರೀಕ್ಷೆಯಾಗಿದ್ದು , ಈ ಹಿಂದೆ 2012 ರ ಎಪ್ರಿಲ್ 19 ಮತ್ತು 2013ರ ಸೆಪ್ಟಂಬರ್ 15 ರಂದು ಯಶಸ್ವೀಯಾಗಿ ಕ್ಷಿಪಣಿ ಪ್ರಯೋಗಾರ್ಥ ಉಡಾವಣೆ ನಡೆಸಲಾಗಿತ್ತು.
ಯೋಜನೆಯ ಎಲ್ಲ ನಿರೀಕ್ಷೆಗಳೂ ಈಡೇರಿದ್ದು, ಈ ಮೂಲಕ ಮತ್ತೊಂದು ಕನಸು ನನಸಾಗಿದೆ. ನಮ್ಮ ಪ್ರಕಾರ ಇದು ಶೇ. 200ರಷ್ಟು ಯಶಸ್ಸು ಗಳಿಸಿದ್ದು, ಇದಕ್ಕಿಂತ ಉತ್ತಮ ಪರಿಣಾಮವನ್ನು ನಾವು ನಿರೀಕ್ಷಿಸುವುದು ಸಾಧ್ಯವಿಲ್ಲ ಎಂದು ಡಿಆರ್‌ಡಿಓ ಪ್ರಧಾನ ನಿರ್ದೇಶಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


