ಸ್ಪೇನ್‌ನಲ್ಲಿ ಜೆಟ್ ಅಪಘಾತ: 10 ಪೈಲಟ್‌ಗಳ ಸಾವು
ಗ್ರೀಕ್ ನ ಫೈಟರ್ ಜೆಟ್ ಅಪಘಾತಕ್ಕೀಡಾಗಿ 10 ಪೈಲೆಟ್ ಗಳು ಸ್ಥಳದಲ್ಲೇ ಸಾವನಪ್ಪಿದ್ದು, 21 ಮಂದಿ ಗಾಯಗೊಂಡಿರುವ ಘಟನೆ ಸ್ಪೇನ್ ನ ನ್ಯಾಟೊ ಪೈಲಟ್ ತರಬೇತಿ...

ಮ್ಯಾಡ್ರಿಕ್ : ಗ್ರೀಕ್ ನ ಫೈಟರ್ ಜೆಟ್ ಅಪಘಾತಕ್ಕೀಡಾಗಿ 10 ಪೈಲೆಟ್ ಗಳು ಸ್ಥಳದಲ್ಲೇ ಸಾವನಪ್ಪಿದ್ದು, 21 ಮಂದಿ ಗಾಯಗೊಂಡಿರುವ ಘಟನೆ ಸ್ಪೇನ್ ನ ನ್ಯಾಟೊ ಪೈಲಟ್ ತರಬೇತಿ ಕೇಂದ್ರದ ವಾಯು ನೆಲೆಯಲ್ಲಿ ನಡೆದಿದೆ.
ಸ್ಪೇನ್ ನ ನ್ಯಾಟೊ ಪೈಲಟ್ ತರಬೇತಿ ಕೇಂದ್ರದ ವಾಯು ನೆಲೆಯಲ್ಲಿ ಸಂಭವಿಸಿದ ಗ್ರೀಕ್‌ನ ಫೈಟರ್ ಜೆಟ್ ಅಪಘಾತಕ್ಕಿಡಾಗಿದ್ದು, ಫ್ರಾನ್ಸ್‌ನ 8 ಮಂದಿ ಹಾಗೂ ಗ್ರೀಕ್‌ನ ಇಬ್ಬರು ಸೇರಿ ಒಟ್ಟು 10 ಮಂದಿ ತರಬೇತಿ ಪಡೆಯುತ್ತಿದ್ದ ಪೈಲಟ್‌ಗಳು ಸಾವನ್ನಪ್ಪಿದ್ದಾರೆ.
ಎಫ್-16 ಫೈಟರ್‌ಜೆಟ್ ವಾಯು ನೆಲೆಯಿಂದ ಟೇಕ್ ಆಫ್ ಆಗುತ್ತಿದ್ದಂತೆಯೇ ನೈರುತ್ಯ ದಿಕ್ಕಿನ ಹೆಲ್‌ಬೆಸೆಟ್ ನಗರದ ಬಳಿ ದುರಂತಕ್ಕೀಡಾಯಿತು ಎಂದು ಮಿಲಿಟರಿ ಮೂಲಗಳು ತಿಳಿಸಿವೆ.
ಜೆಟ್ ಇದ್ದಕ್ಕಿದ್ದಂತೆ ಬೇರೆ ವಿಮಾನಗಳು ನಿಂತಿದ್ದ ಪ್ರದೇಶದಲ್ಲಿ ಪತನಗೊಂಡಿದ ಪರಿಣಾಮ ಇತರ 5 ವಿಮಾನಗಳು ಜಖಂ ಆಗಿವೆ ಎಂದು ಮೂಲಗಳು ಹೇಳಿವೆ.
ಜೆಟ್ ನ ಎಂಜಿನ್ ವೈಫಲ್ಯದಿಂದಾಗಿ ಬೆಂಕಿ ಹೊತ್ತಿಕೊಂಡು ಕೆಳಕ್ಕೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮೃತರಲ್ಲಿ ಮೂವರು ಕ್ಯಾಪ್ಟನ್‌ಗಳು, ಒಬ್ಬರು ಲೆಫ್ಟಿನೆಂಟ್ ಹಾಗೂ ಪೈಲಟ್‌ಗಳು ಸೇರಿದ್ದಾರೆ. ಘಟನೆಯಲ್ಲಿ ಇಟಲಿಯ 11 ಹಾಗೂ ಫ್ರಾನ್ಸ್‌ನ 10 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


