'ಗಾಂಧಿ ಬಾಟ್'ನಿಂದ ಹಿಂದೆ ಸರಿದ ಅಮೆರಿಕ ಬಿಯರ್ ಕಂಪನಿ
ಮದ್ಯಪಾನವನ್ನು ವಿರೋಧಿಸಿದ್ದ ಮಹಾತ್ಮಾಗಾಂಧಿ ಅವರ ಭಾವಚಿತ್ರವನ್ನು ಹಾಕಿ ವಿವಾದಕ್ಕೀಡಾಗಿದ್ದ...

ಮಿಲ್ಫೊರ್ಡ್: ಮದ್ಯಪಾನವನ್ನು ವಿರೋಧಿಸಿದ್ದ ಮಹಾತ್ಮಾಗಾಂಧಿ ಅವರ ಭಾವಚಿತ್ರವನ್ನು ಹಾಕಿ ವಿವಾದಕ್ಕೀಡಾಗಿದ್ದ ಅಮೆರಿಕದ ಮದ್ಯ ತಯಾರಿಕಾ ಸಂಸ್ಥೆ ಕೊನೆಗೂ ಬಾಟಲ್ ಮೇಲಿನ ಗಾಂಧಿ ಚಿತ್ರ ಮತ್ತು ಹೆಸರನ್ನು ತೆಗೆಯಲು ನಿರ್ಧರಿಸಿದೆ.
ಈ ಕುರಿತಂತೆ ಅಧಿಕೃತವಾಗಿ ಹೇಳಿಕೆ ನೀಡಿರುವ ಅಮೇರಿಕದ ನ್ಯೂ ಇಂಗ್ಲೆಂಡ್ ಬ್ರ್ಯೂಯಿಂಗ್ ಕಂಪನಿ, ಭಾರತ ಹಾಗೂ ಅಮೆರಿಕಾದ ವ್ಯವಹಾರಿಕ ಅಧಿಕಾರಿಗಳೊಂದಿಗೆ ಕಂಪನಿ ಚರ್ಚೆ ನಡೆಸಿದ್ದು, ಚರ್ಚೆಯಲ್ಲಿ ಬಿಯರ್ ಬಾಟಲಿನ ಹೆಸರು ಹಾಗೂ ಚಿತ್ರವನ್ನು ತೆಗೆದು ರಿಬ್ರಾಂಡ್ ಮಾಡಲಾಗುತ್ತದೆ ಎಂದು ಹೇಳಿದೆ. ಅಲ್ಲದೆ, ಈ ರೀತಿಯ ಕ್ರಮದಿಂದ ಮುಂದಿನ ದಿನಗಳಲ್ಲಿ ಕಂಪನಿಗೇನಾದರೂ ನಷ್ಟ ಉಂಟಾದರೆ ಭಾರತ ಹಾಗೂ ಅಮೇರಿಕ ದೇಶದಿಂದ ಬೆಂಬಲ ಸಿಗುತ್ತದೆ ಎಂದು ಕಂಪನಿ ಆಶಿಸಿದೆ.
ಅಮೆರಿಕ ಮೂಲದ 'ನ್ಯೂ ಇಂಗ್ಲೆಡ್ ಬ್ರ್ಯೂಯಿಂಗ್ ಕಂಪನಿ' ಮದ್ಯ ಉತ್ಪಾದನಾ ಸಂಸ್ಥೆಯಾಗಿದ್ದು, ತನ್ನ ಬಿಯರ್ ಬ್ರಾಂಡ್ ಒಂದಕ್ಕೆ ಗಾಂಧಿ ಬಾಟ್ ಎಂಬ ಹೆಸರಿಟ್ಟು, ಬಾಟಲ್ ಹಾಗೂ ಟಿನ್‌ಗಳ ಮೇಲೆ ಗಾಂಧಿ ಅವರ ಚಿತ್ರಗಳನ್ನು ಮುದ್ರಿಸಿತ್ತು.
ಮದ್ಯಪಾನ, ಧೂಮಪಾನವೆಂದರೆ ಪ್ರಬಲವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದ ಬಾಪು ಅವರ ಹೆಸರು ಭಾವಚಿತ್ರವನ್ನು ಬಿಯರ್ ಬಾಟಲಿಯ ಮೇಲೆ ಮುದ್ರಿಸಿದ್ದ ಕಂಪನಿ ಉದ್ಧಟತನದ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನಂತರ ಎಚ್ಚೆತ್ತುಕೊಂಡ ಕಂಪನಿ ಮಹಾತ್ಮಾ ಗಾಂಧಿ ಅವರ ಆದರ್ಶಗಳನ್ನು ತಿಳಿಸಿಕೊಡುವ ಉತ್ಸಾಹದಲ್ಲಿ ಇಂತಹ ಪ್ರಮಾದಗಳು ಎದುರಾಯಿತು ಎಂದು ಹೇಳಿ ಕ್ಷಮೆ ಯಾಚಿಸಿ, ನಂತರ ಬಿಯರ್ ಬಾಟಲುಗಳನ್ನು ಹಿಂಪಡೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


