ಒಬಾಮಗೆ ಖಾಸಗಿ ಔತಣಕೂಟ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭಾರತ ಭೇಟಿಗೆ ಎಲ್ಲ ಸಿದ್ದತೆಗಳು ನಡೆದಿದ್ದು, ಅವರು ಭಾರತದಲ್ಲಿ ಏನೇನು ಮಾಡಲಿದ್ದಾರೆ...

ನವದೆಹಲಿ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭಾರತ ಭೇಟಿಗೆ ಎಲ್ಲ ಸಿದ್ದತೆಗಳು ನಡೆದಿದ್ದು, ಅವರು ಭಾರತದಲ್ಲಿ ಏನೇನು ಮಾಡಲಿದ್ದಾರೆ ಎಂಬ ಬಗ್ಗೆ ಪಟ್ಟಿಯೂ ಸಿದ್ಧ
ವಾಗುತ್ತಿದೆ. ವಿಶೇಷವೆಂದರೆ,ಮೊತ್ತಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 7 ರೇಸ್‍ಕೋರ್ಸ್ ರಸ್ತೆಯ ಲ್ಲಿರುವ ತಮ್ಮ ಅ„ಕೃತ ನಿವಾಸದಲ್ಲಿ ಒಬಾಮಅವರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಇದು ವಿಶೇಷ ಏಕೆಂದರೆ, ಈವರೆಗೆ ಪ್ರಧಾನಿ ಮೋದಿ ಅವರು ವಿದೇಶದ ಯಾವುದೇ ಗಣ್ಯರಿಗೆ ತಮ್ಮ ಅಧಿಕೃತನಿವಾಸದಲ್ಲಿ ಔತಣಕೂಟ ಏರ್ಪಡಿಸಿರಲಿಲ್ಲ.
ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್ ಭಾರತಕ್ಕೆ ಬಂದಿದ್ದಾಗ ಹೈದರಾಬಾದ್ ಹೌಸ್‍ನಲ್ಲಿ, ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರಿಗೆ ಸಬರಮತಿ ತೀರದಲ್ಲಿ ಔತಣ ಕೂಟ ಏರ್ಪಡಿಸಲಾಗಿತ್ತು. ಆದರೆ ಒಬಾಮ ಅವರಿಗೆ ಮಾತ್ರ 7ಆರ್‍ಸಿಆರ್‍ನ ಪಂಚವಟಿ ಸಂಕೀರ್ಣದಲ್ಲಿ ಖಾಸಗಿ ಔತಣಕೂಟ ಆಯೋಜಿಸಲಾಗಿದೆ. ಇದರಲ್ಲಿ ಮೋದಿ ಸಂಪುಟದ ಕೆಲವೇ ಕೆಲವು ಸದಸ್ಯರಷ್ಟೇ ಪಾಲ್ಗೊಳ್ಳಲಿದ್ದಾರೆ.
ಒಬಾಮಗೆ ಖೀಮಾ , ದಾಲ್: ಒಬಾಮ ಕುಟುಂಬಕ್ಕೆ ಯಾವ ರೀತಿಯ ಆಹಾರ ಇಷ್ಟ ಎಂಬುದನ್ನು ಮೊದಲೇ ತಿಳಿದುಕೊಳ್ಳುವಂತೆಯೂ ಮೋದಿ ಅವರು ತಮ್ಮ ಆಪ್ತ
ಸಹಚರರಿಗೆ ತಿಳಿಸಿದ್ದಾರೆ. ಒಬಾಮ ಅವರು ಈಗಾಗಲೇ ತಮ್ಮ ಖೀಮಾ ಮತ್ತು ದಾಲ್ ಮೇಲಿನ ಪ್ರೀತಿಯನ್ನು ತಿಳಿಸಿದ್ದಾರೆ.
ಔತಣಕೂಟ ಜ.25ರಂದು ನಡೆಯುವ ಸಾಧ್ಯತೆಯಿದ್ದು, ದಿನಾಂಕ ನಿಗದಿಯಾಗಿಲ್ಲ.
ಭೇಟಿ ಅವಧಿಯಲ್ಲಿ ಒಬಾಮ ಪ್ರೇಮ ಸೌಧ ತಾಜ್‍ಮಹಲ್‍ಗೆ ಭೇಟಿನೀಡಲಿದ್ದು, ಜ.27ರಂದು ಸಿರಿಪೋರ್ಟ್ ಸಭಾಂಗಣದಲ್ಲಿ `ಇಂಡಿಯಾ ಆ್ಯಂಡ್ ಅಮೆರಿಕ: ದಿ ಫ್ಯೂಚರ್
ವಿ ಕ್ಯಾನ್ ಬಿಲ್ಡ್ ಟುಗೆದರ್' ಎಂಬ ಬಗ್ಗೆ ಸಾರ್ವಜನಿಕ ಭಾಷಣ ಮಾಡಲಿದ್ದಾರೆ.
108 ನಿಮಿಷಗಳ ಔಟಿಂಗ್: ಗಣರಾಜ್ಯೋತ್ಸವ ಪರೇಡ್ ವೇಳೆ ಒಬಾಮ ಅವರು ಒಂದು ಗಂಟೆ 48 ನಿಮಿಷಗಳ ಕಾಲ ರಾಜ್‍ಪಥ್‍ನಲ್ಲಿ ಇರಲಿದ್ದಾರೆ. ಅವರ ಪ್ರತಿ ನಿಮಿಷದ ಕಾರ್ಯಕ್ರಮವನ್ನೂ ನಿಗದಿ ಮಾಡಲಾಗಿದ್ದು, ಸಚಿವರೆಲ್ಲರಿಗೂ ಕಳುಹಿಸಲಾಗಿದೆ. ರಾಷ್ಟ್ರಪತಿ
ಪ್ರಣಬ್ ಅವರೊಂದಿಗೆ ಬೆಳಗ್ಗೆ 9.57ಕ್ಕೆ ರಾಜ್‍ಪಥ್‍ಗೆ ಆಗಮಿಸಲಿರುವ ಒಬಾಮಪರೇಡ್ ಮುಗಿಯುವವರೆಗೆ ಅಂದರೆ ೧೧. ೪೫ ರ ವರೆಗೆ ಅಲ್ಲಿರಲಿದ್ದಾರೆ.
ನಮಗೆ ಅಮೆರಿಕ ಎಚ್ಚರಿಕೆ ಕೊಟ್ಟಿಲ್ಲ ಎಂದ ಪಾಕ್
ಒಬಾಮ ಭೇಟಿ ವೇಳೆ ಭಾರತದಲ್ಲಿ ಯಾವುದೇ ಉಗ್ರ ಕೃತ್ಯನಡೆಯಬಾರದು ಎಂದು ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ ಎಂಬ ವರದಿಯನ್ನು ಪಾಕ್ ಸರ್ಕಾರ ತಳ್ಳಿಹಾಕಿದೆ.ಅಂತಹ ಯಾವುದೇ ಎಚ್ಚರಿಕೆ ಬಂದಿಲ್ಲ. ಭಾರತವು ಸುಖಾಸುಮ್ಮನೆ ಎಲ್ಲವನ್ನೂ ವೈಭವೀಕರಿಸಿ ಮಾತನಾಡುತ್ತದೆಎಂದು ಅಮೆರಿಕದಲ್ಲಿನ ಪಾಕಿಸ್ತಾನ ರಾಯಭಾರಿ ಜಲೀಲ್
ಅಬ್ಬಾಸ್ ಜಿಲಾನಿ ಹೇಳಿದ್ದಾರೆ. ಈ ಮೂಲಕ ತಮಗಾದಮುಜುಗರವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


