ದೇಶ

ಹೆಣ್ಣಿಂದ 10 ಮಕ್ಕಳನ್ನು ಹೆರಲು ಸಾಧ್ಯವಿಲ್ಲ: ಅಜಂಖಾನ್

ಓರ್ವ ಹೆಣ್ಣಿಂದ 10 ಮಕ್ಕಳನ್ನು ಹೆರಲು ಸಾಧ್ಯವಿಲ್ಲ. ಒಂದು ವೇಳೆ 10 ಮಕ್ಕಳು ಬೇಕು ಎನ್ನುವುದಾದರೇ 4 ಪತ್ನಿ..

ಹೆಣ್ಣಿಂದ 10 ಮಕ್ಕಳನ್ನು ಹೆರಲು ಸಾಧ್ಯವಿಲ್ಲ: ಅಜಂಖಾನ್
ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ (ಸಂಗ್ರಹ ಚಿತ್ರ)
Published On :

ಲಖನೌ: ಓರ್ವ ಹೆಣ್ಣಿಂದ 10 ಮಕ್ಕಳನ್ನು ಹೆರಲು ಸಾಧ್ಯವಿಲ್ಲ. ಒಂದು ವೇಳೆ 10 ಮಕ್ಕಳು ಬೇಕು ಎನ್ನುವುದಾದರೇ 4 ಪತ್ನಿಯರು ಬೇಕು ಎಂದು ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಹೇಳಿದ್ದಾರೆ.

ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರ 10 ಮಕ್ಕಳ ಹೆರುವ ಹೇಳಿಕೆ ಹಿನ್ನಲೆಯಲ್ಲಿ ಮಾತನಾಡಿದ ಅಜಂಖಾನ್ ಅವರು, ಓರ್ವ ಹೆಣ್ಣು 10 ಮಕ್ಕಳನ್ನು ಹೆರಲು ಸಾಧ್ಯವಿಲ್ಲ. ಆಕೆಯ ದೇಹ ವ್ಯವಸ್ಥೆ 2ರಿಂದ 3 ಮಕ್ಕಳನ್ನು ಮಾತ್ರ ಹೆರಲು ಶಕ್ತ್ಯವಾಗಿರುತ್ತದೆ. ಒಂದು ವೇಳೆ 10 ಮಕ್ಕಳು ಬೇಕೇ ಬೇಕು ಎನ್ನುವುದಾದರೆ 4 ಪತ್ನಿಯರನ್ನು ಹೊಂದಬೇಕಾಗುತ್ತದೆ ಎಂದು ಹೇಳಿದರು.

ಸಾಕ್ಷಿ ಮಹಾರಾಜ್ ಅವರ ಹೇಳಿಕೆ ಕುರಿತಂತೆ ವ್ಯಂಗ್ಯವಾಡಿದ ಅಜಂಖಾನ್ ಅವರು, '10 ಮಕ್ಕಳು ಬೇಕು ಎನ್ನುವ ಮೂಲಕ ಪರೋಕ್ಷವಾಗಿ ಅವರು, ಇಸ್ಲಾಂ ಅನ್ನು ಒಪ್ಪಿಕೊಂಡಿದ್ದಾರೆ. ಇಸ್ಲಾಂನಲ್ಲಿ ಬಹುಪತ್ನಿಯರನ್ನು ಹೊಂದುವ ಅವಕಾಶವಿದ್ದು, 10 ಮಕ್ಕಳನ್ನು ಹೆರಬೇಕು ಎಂದರೆ ಬಹುಪತ್ನಿಯರಿರಬೇಕು ಎಂದು ಹೇಳಿದರು.

ಅಜಂಖಾನ್ ಅವರ ಹೇಳಿಕೆ ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದು, ಸಾಕಷ್ಟು ಮಹಿಳಾ ಸಂಘಟನೆಗಳು ಹೇಳಿಕೆಯನ್ನು ಖಂಡಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.