ಲಂಕೆಯಲ್ಲಿ ಪತನವಾದ ಚೀನಾ ಮಹತ್ವಾಕಾಂಕ್ಷೆ
ವಿಶ್ವದ ಹಿರಿಯಣ್ಣನಿಗೆ ಸೆಡ್ಡು ಹೊಡೆಯುವ ರೀತಿ ಬೆಳೆಯುತ್ತಿರುವ, ದಕ್ಷಿಣ ಏಷ್ಯಾದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿ...

ನವದೆಹಲಿ: ವಿಶ್ವದ ಹಿರಿಯಣ್ಣನಿಗೆ ಸೆಡ್ಡು ಹೊಡೆಯುವ ರೀತಿ ಬೆಳೆಯುತ್ತಿರುವ, ದಕ್ಷಿಣ ಏಷ್ಯಾದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು, ಈ ಮೂಲಕ ಏಷ್ಯಾದ ಅನಭಿಷಿಕ್ತ ನಾಯಕನಾಗಲು ಹೊರಟಿರುವ ಚೀನಾಗೆ ಮೊದಲ ಹಿನ್ನಡೆ ಶ್ರೀಲಂಕಾ ಚುನಾವಣೆ ಮೂಲಕ ಆಗಿದೆ.
ಮೇಲ್ನೋಟಕ್ಕೆ ಇದು ಸಹಜ ಸೋಲು. ಆದರೆ ಇದರ ಹಿಂದೆ ಭಾರತದ ಚತುರ ರಾಜನೀತಿಯ ಕೈವಾಡ ಇರುವ ಸುಳಿವು ದೊರಕಿದೆ. ರಾಜಪಕ್ಸೆ ಜತೆಗಿನ ನಂಟನ್ನು ಮುಂದಿಟ್ಟುಕೊಂಡು ಹಿಂದೂ ಮಹಾಸಾಗರದಲ್ಲಿ ಪ್ರಾಬಲ್ಯ ಮೆರೆಯಲು ಹೊರಟಿದ್ದ ಚೀನಾ ಮಹತ್ವಾಕಾಂಕ್ಷೆಯನ್ನು ಮಟ್ಟಹಾಕಲೆಂದೇ ಭಾರತ ಇಂಥದ್ದೊಂದು ಆಟ ಆಡಿತೇ? ಈ ಮೂಲಕ ಚೀನಾಗೆ ತನ್ನ ಸಾಮರ್ಥ್ಯವೇನೆಂಬ ಸಂದೇಶವನ್ನು ರವಾನಿಸಿತೇ ಭಾರತ ಎನ್ನುವ ಶಂಕೆ ಹುಟ್ಟಿಕೊಂಡಿದೆ.
ವಿಶ್ವದ ಸೂಪರ್ ಪವರ್ ಆಗಿ ಬೆಳೆಯುತ್ತಿರುವ ಭಾರತದ ಸಾಮರ್ಥ್ಯವನ್ನು ಅಲ್ಲಗಳೆಯುತ್ತಲೇ ಏಷ್ಯಾದ ಶಕ್ತಿ ಕೇಂದ್ರವಾಗಿ ಬೆಳೆಯಲು ಚೀನಾ ನಡೆಸುತ್ತಿದ್ದ ತಂತ್ರಗಾರಿಕೆ ಗುಟ್ಟಾಗೇನೂ ಅಲ್ಲ. ಚೀನಾದ ಈ ತಂತ್ರಗಾರಿಕೆಯ ಅರಿವಿದ್ದರೂ ಸಮ್ಮಿಶ್ರ ರಾಜಕಾರಣಕ್ಕೆ ಸಿಕ್ಕು ಹೈರಾಣಾಗಿದ್ದ ಹಿಂದಿನ ಯುಪಿಎ ಸರ್ಕಾರ ಮೌನವಾಗಿತ್ತು. ಆದರೆ, ಈಗ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ ಸದ್ದಿಲ್ಲದೆ ಪ್ರತಿತಂತ್ರ ಹೆಣೆಯುತ್ತಿದೆ. ದೇಶದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಏಷ್ಯಾದಲ್ಲಿ ಅದರಲ್ಲೂ ಮುಖ್ಯವಾಗಿ ದಕ್ಷಿಣ ಏಷ್ಯಾಕ್ಕೆ ಸಂಬಂಧಿಸಿ ನಿಲುವು ಬದಲಾಗಿದೆ. ಚೀನಾ ತನ್ನ ನೆರೆಯ ರಾಷ್ಟ್ರಗಳ ಗಡಿಯಲ್ಲಿ ರಸ್ತೆ, ರೈಲು ಮಾರ್ಗದಂಥ ಮೂಲ ಸೌಲಭ್ಯ ಅಭಿವೃದ್ಧಿಪಡಿಸುತ್ತಿರುವುದನ್ನು ಮನಗಂಡು ಅಸಿಯಾನ್, ಸಾರ್ಕ್ ರಾಷ್ಟ್ರಗಳ ಜತಗೆ ಭಾರತವೂ ಉತ್ತಮ ವ್ಯಾಪಾರ ಸಂಬಂಧ ಬೆಳೆಸುವ ಕಾರ್ಯಕ್ಕೆ ಕೈ ಹಾಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


