ಮತ್ತು ಬರಿತ ಚಹಾ ಕುಡಿಸಿ 2 ಕೋಟಿ ದೋಚಿದ ಸೆಕ್ಯುರಿಟಿ ಗಾರ್ಡ್!

ಮುಂಬೈ: ಸೆಕ್ಯುರಿಟಿ ಗಾರ್ಡ್ ಚಹಾದಲ್ಲಿ ಮತ್ತು ಬರಿಸುವ ಪದಾರ್ಥ ಬೆರೆಸಿ ಸಿಬ್ಬಂದಿಗಳನ್ನು ಪ್ರಜ್ಞೆ ತಪ್ಪಿಸಿ 2 ಕೋಟಿ ರು. ದೋಚಿಕೊಂಡು ಪರಾರಿಯಾಗಿದ್ದಾನೆ.
ಎಟಿಎಂಗಳಿಗೆ ಹಣ ತುಂಬುವ ಸಲುವಾಗಿ ಹಣ ತೆಗೆದುಕೊಂಡು ಹೋಗುತ್ತಿದ್ದ ಸಿಬ್ಬಂದಿಗಳಿಗೆ ವಾಹನದಲ್ಲಿ ಭದ್ರತೆಗಾಗಿ ನಿಯೋಜಿತನಾಗಿದ್ದ ಗಾರ್ಡ್ ಚಹಾ ಕುಡಿಯುವ ನೆಪದಲ್ಲಿ ವಾಹನ ನಿಲ್ಲಿಸಿ, ತಾನು ತಂದ ಚಹಾಕ್ಕೆ ಮತ್ತು ಬರಿಸುವ ಪದಾರ್ಥ ಬೆರೆಸಿ ಸಿಬ್ಬಂದಿಗಳಿಗೆ ನೀಡಿದ್ದನು.
ಮುಂಬೈನ ವಿಲೇ ಪಾರ್ಲೆ ಬಳಿಯ ಎಕ್ಸ್ ಪ್ರೆಸ್ ಹೈವೇ ಯಲ್ಲಿ ಶುಕ್ರವಾರ ಹಾಡಹಗಲೇ ಈ ಘಟನೆ ನಡೆದಿದ್ದು, ಹಣ ಸಾಗಿಸುತ್ತಿದ್ದ ವಾಹನದಲ್ಲಿ ಮುಖ್ಯ ಆರೋಪಿ ಸೆಕ್ಯುರಿಟಿ ಗಾರ್ಡ್ ಸಾದರ್ ಆಲಂ ಸೇರಿದಂತೆ ನಾಲ್ವರಿದ್ದರು. ಆರೋಪಿ ಗಾರ್ಡ್ ಮೊದಲೇ ರೂಪಿಸಿದ ಸಂಚಿನಂತೆ ನಿಗದಿತ ಸ್ಥಳದಲ್ಲಿ ಚಹಾ ಕುಡಿಯುವ ನೆಪ ಹೇಳಿ ವಾಹನ ನಿಲ್ಲಿಸಿದ್ದಾನೆ. ಬಳಿಕ ತಾನೇ ತೆರಳಿ ವಾಹನದಲ್ಲಿದ್ದ ಮೂವರಿಗೆ ಮತ್ತಿನ ಪದಾರ್ಥ ಬೆರೆಸಿದ್ದ ಚಹಾ ತಂದು ನೀಡಿದ್ದಾನೆ.
ಇದನ್ನು ಕುಡಿಯುತ್ತಿದ್ದಂತೆಯೇ ವಾಹನದ ಚಾಲಕ ಸೇರಿ ಮತ್ತಿಬ್ಬರು ಪ್ರಜ್ಞಾಶೂನ್ಯರಾಗಿದ್ದು, ಇವರುಗಳಿದ್ದ ವಾಹನವನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡೇ ಬರುತ್ತಿದ್ದ ಸೆಕ್ಯುರಿಟಿ ಗಾರ್ಡ್ ಸಾದರ್ ಆಲಂನ ಸಹಚರರು ವಾಹನದಲ್ಲಿದ್ದ ಸುಮಾರು 2 ಕೋಟಿ ರೂ. ಹಣವನ್ನು ತೆಗೆದುಕೊಂಡು ಆತನೊಂದಿಗೆ ಪರಾರಿಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ನಾಕಾಬಂದಿ ಏರ್ಪಡಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


