ಸುಂದರ ನಟಿ ಕತ್ರಿನಾ ರಾಷ್ಟ್ರಪತಿಯಾಗಲಿ
ಆರ್ಥಿಕ ಹಿಂಜರಿತ ಹೊಂದಿರುವ ಕ್ರೋವೇಸಿಯಾ ಎಂಬ ರಾಷ್ಟ್ರದಲ್ಲಿ ಗ್ರಬಾರ್ ಕಿಟಾರೋವಿಕ್...

ನವದೆಹಲಿ: ಆರ್ಥಿಕ ಹಿಂಜರಿತ ಹೊಂದಿರುವ ಕ್ರೋವೇಸಿಯಾ ಎಂಬ ರಾಷ್ಟ್ರದಲ್ಲಿ ಗ್ರಬಾರ್ ಕಿಟಾರೋವಿಕ್ ಎಂಬ ಸುಂದರ ಮಹಿಳೆ ಅಧ್ಯಕ್ಷರಾಗುತ್ತಾರೆ. ಅದೇ ರೀತಿ ನಮ್ಮ ದೇಶದ ರಾಷ್ಟ್ರಪತಿಯಾಗಿ ಬಾಲಿವುಡ್ ನಟಿ ಕತ್ರಿನಾ ಕೈಫ್‌ರನ್ನು ಆಯ್ಕೆ ಮಾಡಬೇಕು. ಆದರೆ ಷರತ್ತೇನೆಂದರೆ ತಮ್ಮ ಮೊದಲ ಭಾಷಣದಲ್ಲಿ ಅವರು ಶೀಲಾ ಕಿ ಜವಾನಿ ಹಾಡನ್ನು ಹಾಡಬೇಕು
-ಹೀಗೆಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ನಲ್ಲಿ ಬರೆದಕೊಂಡಿದ್ದಾರೆ.
ಬ್ಲಾಗ್‌ನಲ್ಲಿ ಏನಿದೆ?: ಸುಂದರ ಮಹಿಳೆಯರು ಚುನಾವಣೆಯಲ್ಲಿ ನಿಂತು ಆಯ್ಕೆಯಾಗುವುದನ್ನು ಯಾವಾಗಲೂ ಬೆಂಬಲಿಸುತ್ತೇನೆ. ವಿಶೇಷವಾಗಿ ನಟಿಯರು ಆಯ್ಕೆಯಾಗಬೇಕು. ಅವರು ಅಂದವಾಗಿರುತ್ತಾರಲ್ಲ ಅದಕ್ಕೆ. ಏಕೆಂದರೆ ಜನಪ್ರತಿನಿಧಿಗಳು ಚುನಾವಣೆ ಪ್ರಚಾರದ ವೇಳೆ ಎಲ್ಲದರ ಬಗ್ಗೆಯೂ ಭರವಸೆ ನೀಡುತ್ತಾರೆ. ನಂತರ ಅದನ್ನು ಮರೆತು ಬಿಡುತ್ತಾರೆ. ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ನೀವು ಯಾರಾದರೊಬ್ಬರನ್ನು ಆರಿಸಲೇಬೇಕು. ಅದು ಹೊಸ ಮುಖ ಯಾಕಾಗಬಾರದು? ಕೊನೆ ಪಕ್ಷ ಚಿತ್ರ ನಟಿಯರನ್ನು ಟಿವಿಯಲ್ಲಿ ನೋಡಿದಾಗ ಕ್ಷಣಿಕ ಸಂತೋಷ ಪಡಬಹುದು. ಇಲ್ಲದಿದ್ದರೆ ನಿಮಗೆ ಹೇಗೂ ಏನೂ ಸಿಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


