ದೇಶ

ಗಂಗಾ ಶುದ್ಧಿಕರಣ ಇದೇ ಆಡಳಿತಾವಧಿಯಲ್ಲಿ ಮುಗಿಯುತ್ತಾ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ನಿಧಾನಗತಿಯಲ್ಲಿ ಸಾಗುತ್ತಿರುವ ಗಂಗಾನದಿ ಶುದ್ಥಿಕರಣ ಕುರಿತಂತೆ ಸುಪ್ರೀಂಕೋರ್ಟ್ ಮತ್ತೆ ಕೇಂದ್ರ ಸರ್ಕಾರವನ್ನು...

ಗಂಗಾ ಶುದ್ಧಿಕರಣ ಇದೇ ಆಡಳಿತಾವಧಿಯಲ್ಲಿ ಮುಗಿಯುತ್ತಾ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
ಗಂಗಾನದಿ
Published On :

ನವದೆಹಲಿ: ನಿಧಾನಗತಿಯಲ್ಲಿ ಸಾಗುತ್ತಿರುವ ಗಂಗಾನದಿ ಶುದ್ಥಿಕರಣ ಕುರಿತಂತೆ ಸುಪ್ರೀಂಕೋರ್ಟ್ ಮತ್ತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಗಂಗಾನದಿ ಶುದ್ಧಿಕರಣ ಕ್ರಿಯಾ ಯೋಜನೆ ಮಂದಗತಿಯಲ್ಲಿ ಸಾಗುತ್ತಿದ್ದು, ಇದೇ ಆಡಳಿತಾವಧಿಯಲ್ಲಿ ಮುಗಿಸುತ್ತೀರಾ ಅಥವಾ ಮುಂದಿನ ಆಡಳಿತಾವಧಿಗೂ ತೆಗೆದುಕೊಂಡು ಹೋಗುತ್ತೀರ ಎಂದು ಎನ್‌ಡಿಎ ಸರ್ಕಾರವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

ಕಳೆದ 30 ವರ್ಷಗಳಿಂದ ಗಂಗಾ ಶುದ್ಧಿಕರಣಕ್ಕಾಗಿ ಕಾರ್ಯ ನಡೆಯುತ್ತಿದ್ದು, ಇಲ್ಲಿಯವರೆಗೂ ಇದಕ್ಕಾಗಿ ಸುಮಾರು 2000 ಕೋಟಿ ವೆಚ್ಚವಾಗಿದೆ ಹೊರತು ಯಾವುದೇ ಪ್ರಗತಿ ಕಾಣುತ್ತಿಲ್ಲವೆಂಬ ಅಂಶವನ್ನು ಪ್ರಸ್ತಾಪಿಸಿದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠದ ನ್ಯಾಯಮೂರ್ತಿ ಟಿ.ಎಸ್ ಟಾಕೂರ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕೇಂದ್ರ ಸರ್ಕಾರ ಪ್ರತಿನಿಧಿ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರು, ಗಂಗಾನದಿ ಶುದ್ಧಿಕರಣ ಯೋಜನೆ 2018ರೊಳಗೆ ಮುಗಿಸಲಾಗುವುದು ಎಂದರು. ಈಗಾಗಲೇ ಗಂಗಾನದಿಯುದ್ದಕ್ಕೂ ಸುಮಾರು 118 ಪಟ್ಟಣಗಳಲ್ಲಿ ಕೊಳಚೆ ನೀರು ಘಟಕಗಳ ಸ್ಥಾಪನೆಗೆ ಗುರುತಿಸಲಾಗಿದೆ ಎಂದರು.

2,500 ಕಿ.ಮೀ ದೂರದ ಗಂಗಾನದಿಯ ಶುದ್ಧಿಕರಣಕ್ಕೆ ಸಂಬಂಧಿಸಿದಂತೆ ಕಳೆದ ಆರು ತಿಂಗಳಲ್ಲೇ ಇದು ಎರಡನೇ ಬಾರಿಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.