ಸ್ವಾಮಿಗೆ ಕೊಲೆಗಾರ ಯಾರೆಂಬುದು ಗೊತ್ತಿದ್ದರೆ ಹೆಸರು ಬಹಿರಂಗಪಡಿಸಲಿ
ಸುಬ್ರಹ್ಮಣ್ಯಸ್ವಾಮಿ ವಿರುದ್ಧ ತರೂರ್ ಆರೋಪ...

ನವದೆಹಲಿ: ಸುನಂದಾ ಸಾವು ಪ್ರಕರಣಕ್ಕೆ ಸಂಬಂಧಿಸಿ ಪತಿ, ಸಂಸದ ಶಶಿ ತರೂರ್ ಮತ್ತು ಬಿಜೆಪಿ ಸಂಸದ ಸುಬ್ರಹ್ಮಣ್ಯಸ್ವಾಮಿ ನಡುವೆ ಮಂಗಳವಾರ ತೀವ್ರ ವಾಕ್ಸಮರ ನಡೆದಿದೆ.
ಸುನಂದಾ ಸಾವು ಪ್ರಕರಣದಲ್ಲಿ ಪದೇ ಪದೆ ಮಾತನಾಡುತ್ತಿದ್ದ ಸುಬ್ರಹ್ಮಣ್ಯ ಸ್ವಾಮಿ ವಿರುದ್ಧ ತೀವ್ರ ಕಿಡಿಕಿಡಿಯಾಗಿರುವ ತರೂರ್, ಅವರು ಯಾರ? ಅವರಿಗೆ ಕೊಲೆಗಾರನ ಬಗ್ಗೆ ಗೊತ್ತಿದ್ದರೆ ಪೊಲೀಸರಿಗೆ ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.
ಇದಕ್ಕೆ ಸ್ವಾಮಿ ಕೂಡ ತೀವ್ರ ತಿರುಗೇಟು ನೀಡಿದ್ದಾರೆ. ನಾನು ಸಾಕ್ಷಿ ಇಲ್ಲದೆ ಮಾತನಾಡುವುದಿಲ್ಲ. ಸಮಯ ಬಂದಾಗ ನಾನು ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದಾರೆ.
ಜತೆಗೆ, ನನಗೆ ಕೊಲೆಗಾರ ಯಾರೆಂಬುದು ಗೊತ್ತು ಎಂದು ನಾನು ಹೇಳಿಲ್ಲ. ಆದರೆ, ತರೂರ್ ಅವರಿಗೆ ಕೊಲೆಗಾರ ಯಾರೆಂಬುದು ಗೊತ್ತಿದೆ ಎನ್ನುವುದಷ್ಟೇ ಹೇಳಿದ್ದೆ ಎಂದೂ ಸ್ಪಷ್ಟನೆ ನೀಡಿದ್ದಾರೆ.
ಕಳೆದ ವಾರ ಕೂಡ ಸ್ವಾಮಿ ಅವರು, ತರೂರ್‌ಗೆ ಕೊಲೆಗಾರ ಯಾರೆನ್ನುವುದು ಗೊತ್ತು. ಅವರು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


