ಸ್ವಾಮಿಗೆ ಸುನಂದಾ ಹಂತಕ ಯಾರೆಂದು ತಿಳಿದಿದ್ರೆ ಬಹಿರಂಗಪಡಿಸಲಿ: ಶಶಿ ತರೂರ್

ನವದೆಹಲಿ: ಸುನಂದಾ ಪುಷ್ಕರ್ ಹಂತಕ ಯಾರೆಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿಗೆ ತಿಳಿದಿದ್ರೆ ಬಹಿರಂಗಪಡಿಸಲಿ ಎಂದು ಶಶಿ ತರೂರ್ ತಿರುಗೇಟು ನೀಡಿದ್ದಾರೆ.
ಸುಖಾ ಸುಮ್ಮನೆ ಆರೋಪ ಮಾಡುತ್ತಿರುವ ಸ್ವಾಮಿಗೆ ಬಹಿರಂಗ ಸವಾಲು ಹಾಕಿರುವ ಶಶಿ ತರೂರ್ ಸ್ವಾಮಿಗೆ ಸುನಂದಾ ಹಂತಕರು ಯಾರೆಂದು ತಿಳಿದಿದ್ರೆ ಪೊಲೀಸರ ಮುಂದೆ ಬಹಿರಂಗ ಪಡಿಸಲಿ ಎಂದಿದ್ದಾರೆ. ಪ್ರಕರಣದ ಬಗ್ಗೆ ಹೇಳಿಕೆ ನೀಡಲು ಸ್ವಾಮಿ ಯಾರು ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸ್ವಾಮಿ, ಸುನಂದಾ ಶಶಿ ತರೂರ್ ಕೊಲೆ ಮಾಡಿದ್ದಾರೆಂದು ನಾನು ಹೇಳಿಲ್ಲ, ಆದರೆ ಶಶಿ ತರೂರ್‌ಗೆ ಹಂತಕರು ಯಾರೆಂದು ಗೊತ್ತಿದೆ. ಶಶಿ ತರೂರ್ ಬಾಯಿಬಿಟ್ಟರೆ ಏಳು ನಾಯಕರು ಸಿಕ್ಕಿಬೀಳುತ್ತಾರೆ ಎಂದು ಸ್ವಾಮಿ ಹೇಳಿದರು.
ತರೂರ್ ಪ್ರಕರಣವನ್ನು ಮುಚ್ಚಿಹಾಕಲು ಸುಳ್ಳುಗಳ ಕಂತೆಯನ್ನು ಸೃಷ್ಟಿಸಿದ್ದಾರೆ ಎಂದು ಸ್ವಾಮಿ ಶನಿವಾರ ಆರೋಪಿಸಿದ್ದರು. ತರೂರ್‌ಗೆ ಸುನಂದಾರನ್ನು ಕೊಲೆ ಮಾಡಿದ್ದು ಯಾರೆಂದು ಗೊತ್ತಿದ್ದು, ಹತ್ಯೆಗೆ ನೆರವಾಗಿದ್ದಾರೆ. ಅವರು ಸುಳ್ಳುಗಳನ್ನು ಹೇಳುವ ಮೂಲಕ ಪ್ರಕರಣ ಮುಚ್ಚಲು ಪ್ರಯತ್ನಿಸಿದ್ದರಿಂದ ಅವರನ್ನು ಕೂಡ ಜೈಲಿಗೆ ಕಳಿಸಬೇಕು, ಆದರೆ ಮರಣ ದಂಡನೆ ಇರುವುದಿಲ್ಲ ಎಂದು ಸ್ವಾಮಿ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


