ವಿದ್ಯಾರ್ಥಿನಿಯರ ಅಂಡಾಣು ಮಾರಾಟ!
ನಮ್ಮಲ್ಲಿ ಕೆಲ ಕಾಲೇಜು ಯುವಕರು 'ವಿಕಿ ಡೋನರ್' ಮಾದರಿಯಲ್ಲಿ ವೀರ್ಯ ಮಾರಿ...

ಬೀಜಿಂಗ್: ನಮ್ಮಲ್ಲಿ ಕೆಲ ಕಾಲೇಜು ಯುವಕರು 'ವಿಕಿ ಡೋನರ್' ಮಾದರಿಯಲ್ಲಿ ವೀರ್ಯ ಮಾರಿ ದುಡ್ಡು ಮಾಡುವುದು ಗೊತ್ತೇ ಇದೆ. ಆದರೆ, ವಿದ್ಯಾರ್ಥಿನಿಯರ ಅಂಡಾಣು ಮಾರಾಟ ದಂಧೆಯ ಬಗ್ಗೆ ಗೊತ್ತಾ?
ಮಕ್ಕಳಿಗಾಗಿ ಹಪಹಪಿಸುವ ದಂಪತಿಯಿಂದ ದುಡ್ಡು ಪಡೆದು ಸುಲಭ ದಾರಿಯಲ್ಲಿ ಹಣ ಮಾಡುವ ದಂಧೆ ಇದು. ಅಂದಹಾಗೆ, ಈ ವ್ಯವಸ್ಥಿತ ದಂಥೆ ನಡೆಯುತ್ತಿರುವುದು ಭಾರತದಲ್ಲಲ್ಲ, ಪಕ್ಕದ ಚೀನಾ ದೇಶದಲ್ಲಿ ಆಘಾತಕಾರಿ ವಿಚಾರವೇನೆಂದರೆ ರೀತಿ ಅಂಡಾಣು ಮಾರಾಟ ಮಾಡುತ್ತಿರುವವರಲ್ಲಿ ಹೆಚ್ಚನವರು ಹೈಸ್ಕೂಲ್ ವಿದ್ಯಾರ್ಥಿನಿಯರು.
ಇದಕ್ಕಾಗಿ ಕೈತುಂಬಾ ಹಣಗಳಿಸುತ್ತಿದ್ದಾರೆ. ಅಂಡಾಣು ಸಂಗ್ರಹಕ್ಕೆ ಹೆಚ್ಚಾಗಿ 20 ವರ್ಷದ ಅಥವಾ ಒಳಗಿನ ವಯಸ್ಸಿನ ಯುವತಿಯರನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಗೃಹಿಣಿಯರಿಗಿಂತ ಈ ವಯಸ್ಸಿನವರ ಅಂಡಾಣುವಿನಲ್ಲಿ ಸತ್ವ ಹೆಚ್ಚಿರುವುದೇ ಇದಕ್ಕೆ ಮುಖ್ಯ ಕಾರಣ.
ಅಂಡಾಣು ಸಂಗ್ರಹಿಸಲು ಔಷಧ ಚಿಕಿತ್ಸೆ ಜತೆಗೆ ಸಣ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ಆದರೆ, ಒಬ್ಬ ಯುವತಿ ಪ್ರತಿ ಬಾರಿ 20ಕ್ಕಿಂತ ಹೆಚ್ಚು ಅಂಡಾಣು ನೀಡಿದಲ್ಲಿ ಆಕೆಯ ಅಂಡಾಣು ಹಿಗ್ಗುವ ಸಾಧ್ಯತೆ ಹೆಚ್ಚಿರುತ್ತದೆ. ಇಲ್ಲವೇ ಅಧಿಕ ರಕ್ತಸ್ರಾವ ಉಂಟಾಗಿ ಪ್ರಾಣಕ್ಕೇ ಸಂಚಕಾರ ಉಂಟಾಗಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


