ದೇಶ

ಲಂಡನ್ನಲ್ಲಿರುವ ಅಂಬೇಡ್ಕರ್ ಮನೆ ಖರೀದಿಸುವಂತೆ ಕೇಂದ್ರಕ್ಕೆ 'ಮಹಾ' ಬಿಜೆಪಿ ಪತ್ರ

ಲಂಡನ್ನಲ್ಲಿರುವ ಭಾರತದ ಸಂವಿಧಾನ ಶಿಲ್ಪಿ...

ಲಂಡನ್ನಲ್ಲಿರುವ ಅಂಬೇಡ್ಕರ್ ಮನೆ ಖರೀದಿಸುವಂತೆ ಕೇಂದ್ರಕ್ಕೆ 'ಮಹಾ' ಬಿಜೆಪಿ ಪತ್ರ
ಬಿ. ಆರ್ ಅಂಬೇಡ್ಕರ್ ಲಂಡನ್‌ ಮನೆ
Published On :

ಮುಂಬೈ: ಲಂಡನ್ನಲ್ಲಿರುವ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ನಿವಾಸವನ್ನು ಖರೀದಿಸುವಂತೆ ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಬಿಜೆಪಿ ಶನಿವಾರ ಪತ್ರ ಬರೆದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ, ಲಂಡನ್ನಲ್ಲಿ ಅಂಬೇಡ್ಕರ್ ಅವರು ವಾಸವಿದ್ದ ಮನೆಯನ್ನು ಖರೀದಿಸಬೇಕು ಎಂದು ಒತ್ತಾಯಿಸಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ತಾವು ಪತ್ರ ಬರೆದಿರುವುದಾಗಿ ಮುಂಬೈ ಬಿಜೆಪಿ ಅಧ್ಯಕ್ಷ ಅಶಿಶ್ ಶೆಲಾರ್ ಅವರು ಹೇಳಿದ್ದಾರೆ.

ಅಂಬೇಡ್ಕರ್ ಅಭಿಮಾನಿಗಳಿಗೆ ಹಾಗೂ ಮಹಾರಾಷ್ಟ್ರ ಜನತೆಗೆ ಇದೊಂದು ಭಾವಾನಾತ್ಮಕ ವಿಚಾರವಾಗಿದ್ದು, ಕೇಂದ್ರ ಸರ್ಕಾರ ಅಂಬೇಡ್ಕರ್ ಅವರ ನಿವಾಸವನ್ನು ಖರೀದಿಸಬೇಕು ಎಂದು ಶೆಲಾರ್ ಒತ್ತಾಯಿಸಿದ್ದಾರೆ.

ಲಂಡನ್ನಲ್ಲಿ ಅಂಬೇಡ್ಕರ್ ಅವರ 2050 ಸ್ಕೈರ್​ ಪೀಟ್​ನ ಮೂರು ಅಂತಸ್ತಿನ ಮನೆ ಮಾರಾಟಕ್ಕಿದ್ದು, ಭಾರತ ಸರ್ಕಾರವೇ ಕೊಂಡುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಬಗ್ಗೆ ಭಾರತ ಸರ್ಕಾರ ಆಸಕ್ತಿಯೇ ತೋರಿಲ್ಲ. ಇದರಿಂದ ಸಂಸ್ಥೆ  ಬೇಸತ್ತು ಬೇರೆ ಗ್ರಾಹಕರನ್ನು ಹುಡುಕುತ್ತಿರುವುದಾಗಿ ಏಜೆಂಟ್​‘ಗಳು ತಿಳಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಅಂಬೇಡ್ಕರ್​ ಅವರ ಲಂಡನ್​ ಮನೆಯನ್ನು ಕೊಳ್ಳಲು ತಮ್ಮ ಸರ್ಕಾರ ಹೊಸ ಪ್ರಸ್ತಾವನೆಯನ್ನು ಕಳುಹಿಸಿದೆ ಎಂದು ಹೇಳಿದ್ದರು. ಆದರೆ, ಇದನ್ನು ಮನೆ ಮಾರಾಟ ಮಾಡುತ್ತಿರುವ ಸಂಸ್ಥೆ ತಳ್ಳಿ ಹಾಕಿದೆ. ಮನೆಯನ್ನು ಕೊಳ್ಳಲು ಭಾರತದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.