ಭಾರತ-ಪಾಕ್ ಗಡಿಯಲ್ಲಿ ಕಾಣಿಸಿಕೊಂಡ ಉಗ್ರ ಹಫೀಜ್ ಸಯ್ಯದ್
ಪಾಕಿಸ್ತಾನದ ಗಡಿಯಲ್ಲಿ ಶನಿವಾರ ರಾತ್ರಿ ಮುಂಬೈ ಸ್ಫೋಟದ ಮಾಸ್ಟರ್ಮೈಂಡ್...

ನವದೆಹಲಿ: ಪಾಕಿಸ್ತಾನದ ಗಡಿಯಲ್ಲಿ ಶನಿವಾರ ರಾತ್ರಿ ಮುಂಬೈ ಸ್ಫೋಟದ ಮಾಸ್ಟರ್ಮೈಂಡ್ ಹಫೀಜ್ ಸಯ್ಯದ್ ಕಾಣಿಸಿಕೊಂಡಿದ್ದನು ಎಂದು ಸೋಮವಾರ ವರದಿಯಾಗಿದೆ.
ಲಷ್ಕರ್-ಇ-ತೋಯ್ಬಾ ಸಂಸ್ಥಾಪಕ ಮತ್ತು ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯ್ಯದ್ ಜಮ್ಮು ಮತ್ತು ಕಾಶ್ಮೀರದ ಸಾಂಬಾ ವಲಯದ ಬಳಿಯಿರುವ ಪಾಕ್ ಗಡಿಯಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಭಾರತ-ಪಾಕ್ ಗಡಿಯಲ್ಲಿ ಉಗ್ರ ಹಫೀಜ್ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ಸಯ್ಯದ್ ಗಡಿಗೆ ಭೇಟಿ ನೀಡಿದ್ದನು. ಕಳೆದ ವರ್ಷ ಸಯ್ಯದ್ ಅಂತರಾಷ್ಟ್ರೀಯ ಗಡಿ ಮತ್ತು ಭಾರತ-ಪಾಕ್ ಗಡಿಗೆ ಭೇಟಿ ನೀಡಿ ರ್ಯಾಲಿ ನಡೆಸಿದ್ದನು.
ಶನಿವಾರ ರಾತ್ರಿ ಪಾಕ್ ಸೇನಾ ಪಡೆ ದಾಳಿ ಮಾಡುವುದನ್ನು ನಿಲ್ಲಿಸಿತ್ತು. ಈ ವೇಳೆ ಭಾರತೀಯ ಸೇನಾ ಪಡೆ ಗಸ್ತು ತಿರುಗುತ್ತಿದ್ದಾಗ ವಾಹನಗಳ ಸಂಚಾರವನ್ನು ಗಮನನಿಸಿದ್ದಾರೆ. ಆ ವೇಳೆ ಸಯ್ಯದ್ ಗಡಿ ಭಾಗದಲ್ಲಿ ಕಾಣಿಸಿಕೊಂಡಿದ್ದಾನೆ. ಅಲ್ಲದೇ ಆತನ ಪರವಾಗಿ ಹಫೀಜ್ ಸಯ್ಯದ್ ಜಿಂದಾಬಾದ್ ಎಂಬ ಘೋಷಣೆ ಕೂಗುತಿತ್ತು ಎಂದು ಸೇನಾ ಪಡೆ ತಿಳಿಸಿದೆ.
ಒಂದೆಡೆ ಮುಂಬೈ ದಾಳಿಯ ಪ್ರಮುಖ ಅಪರಾಧಿ ಹಫೀಜ್ ಸಯ್ಯದ್ಗೆ ಶಿಕ್ಷೆ ವಿಧಿಸಬೇಕೆಂದು ಭಾರತ ಪಾಕಿಸ್ತಾನಕ್ಕೆ ಒತ್ತಾಯಿಸುತ್ತಿದ್ದರೆ ಮತ್ತೊಂದಡೆ ಅದೇ ಪಾಕ್ ಹಫೀಜ್ ಸಯ್ಯದ್ನ ರಕ್ಷಣೆಗೆ ನಿಂತತಿದೆ. ಹಾಗಾಗಿ, ನಿರಾಭಯವಾಗಿ ಸಯ್ಯದ್ ಇಂಡೋ-ಪಾಕ್ ಗಡಿಯಲ್ಲಿ ಓಡಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


