ದೇಶ

ಭಾರತ ರತ್ನ: ದಲಿತರಿಗೆ ಕೇಂದ್ರದಿಂದ ಅನ್ಯಾಯ

ಭಾರತ ರತ್ನ ಗೌರವ ನೀಡುವಲ್ಲಿ ದಲಿತರನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ. ಅಟಲ್...

ಭಾರತ ರತ್ನ: ದಲಿತರಿಗೆ ಕೇಂದ್ರದಿಂದ ಅನ್ಯಾಯ
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ
Published On :

ಲಖನೌ: ಭಾರತ ರತ್ನ ಗೌರವ ನೀಡುವಲ್ಲಿ ದಲಿತರನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ. ಅಟಲ್ ಬಿಹಾರಿ ವಾಜಪೇಯಿ ಮತ್ತು ಮದನ್ ಮೋಹನ್ ಮಾಳವೀಯರಿಗೆ ಅತ್ಯುನ್ನತ ಗೌರವ ನೀಡುವ ವೇಳೆ ಬಿಎಸ್‌ಪಿ ಸಂಸ್ಥಾಪಕ ಕಾನ್ಶೀರಾಮ್ ಅವರನ್ನೂ ಭಾರತ ರತ್ನಕ್ಕಾಗಿ ಪರಿಗಣಿಸಬಹುದಿತ್ತು ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ದೂರಿದ್ದಾರೆ.

ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಯುಪಿಎ ಸರ್ಕಾರ ಕೂಡ ದಲಿತ ವಿರೋಧಿ ನಿಲುವನ್ನು ಅನುಸರಿಸಿತ್ತು. ಹಾಲಿ ಸರ್ಕಾರ ಕೂಡ ಅದನ್ನೇ ಮುಂದುವರಿಸಿದೆ ಎಂದು ಮಾಯಾವತಿ ದೂರಿದರು.

ಕಾನ್ಶೀರಾಮ್, ಜ್ಯೋತಿಬಾ ಪುಲೆ ಅವರು ದಲಿತರು, ಹಿಂದುಳಿದ ವರ್ಗದವರ ಅಭ್ಯುದಯಕ್ಕಾಗಿ ಅಹರ್ನಿಸಿ ಶ್ರಮಿಸಿದ್ದಾರೆ. ಹೀಗಾಗಿ, ಈ ಇಬ್ಬರು ನಾಯಕರಿಗೆ ದೇಶದ ಅತ್ಯುನ್ನತ ಗೌರವ ನೀಡಬಹುದಿತ್ತು ಎಂದಿದ್ದಾರೆ ಬಿಎಸ್‌ಪಿ ನಾಯಕಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.