ಟ್ವಿಟರ್‌ನಲ್ಲಿ ಅವಹೇಳನಕಾರಿ ಭಾಷೆ, ದ್ವೇಷ ಪೂರಿತ ಭಾಷಣಗಳಿಗೆ ನಿಷೇಧ
ಸಾಮಾಜಿಕ ಜಾಲತಾಣ ಟ್ವಿಟರ್ ಅವಹೇಳನಾಕರಿ ಭಾಷೆ ಮತ್ತು ಪ್ರಚೋದನೆ ನೀಡುವಂತಹ ಭಾಷಣಗಳಿಗೆ ನಿಷೇಧವೇರಲಾಗಿದೆ...

ನ್ಯೂಯಾರ್ಕ್: ಸಾಮಾಜಿಕ ಜಾಲತಾಣ ಟ್ವಿಟರ್ ಅವಹೇಳನಾಕರಿ ಭಾಷೆ ಮತ್ತು ಪ್ರಚೋದನೆ ನೀಡುವಂತಹ ಭಾಷಣಗಳಿಗೆ ನಿಷೇಧವೇರಲಾಗಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪದ ಬಳಕೆ, ಧರ್ಮದ ವಿರುದ್ಧ ಭಾಷಣಗಳು ಸೇರಿದಂತೆ ಇತರೆ ಗಲಭೆ ಪ್ರಚೋದನೆ ನೀಡುವಂತಹ ಹೇಳಿಕೆಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಟ್ವಿಟರ್, ಅವಹೇಳನಾಕರಿ ಭಾಷೆ ಮತ್ತು ಪ್ರಚೋದನೆ ನೀಡುವಂತಹ ಭಾಷಣಗಳಿಗೆ ನಿಷೇಧವೇರಿದ್ದು, ಇದನ್ನು ತಡೆಯಲು ನೂತನ ಟೂಲ್ಸ್ ಅನ್ನು ಸೇರ್ಪಡೆ ಮಾಡಿದೆ.
ಇನ್ನು ಮುಂದೆ ಅವಹೇಳನಕಾರಿ ಭಾಷಣ ಸೇರಿದಂತೆ ಗಲಭೆಗೆ ಕಾರಣವಾಗುವಂತಹ ಯಾವುದೇ ಹೇಳಿಕೆಗಳನ್ನು ಟ್ಟಿಟರ್ ಖಾತೆದಾರರು ನೀಡುವಂತಿಲ್ಲ. ಒಂದು ವೇಳೆ ನಿಯಮಗಳನ್ನು ಮೀರಿದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟ್ವಿಟರ್ ಹೇಳಿದೆ.
ಅಲ್ಲದೇ, ಬೆದರಿಕೆ ಸಂದೇಶಗಳಿಗೆ ನಿಷೇಧವೇರಲಾಗಿದ್ದು, ಇನ್ನೂ ಮುಂದೆ ಈ ರೀತಿ ಹೇಳಿಕೆಗಳು, ಸಂದೇಶಗಳನ್ನು ಟ್ವಿಟರ್‌ನಲ್ಲಿ ಪ್ರಕಟವಾಗುವುದಿಲ್ಲ ಎಂದು ಟ್ವಿಟರ್ ಸ್ಪಷ್ಟಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


