ಭೂ ಸ್ವಾಧೀನ ಮಸೂದೆ: ರೈತರ ಸಲಹೆ ಪಡೆಯಲು ಸಮಿತಿ ರಚಿಸಿದ ಶಾ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ವಿವಾದಾತ್ಮಕ ಭೂ ಸ್ವಾಧೀನ ಮಸೂದೆ ಕುರಿತು ರೈತರ ಸಲಹೆ ಪಡೆಯಲು ಎಂಟು ಸದಸ್ಯರನ್ನು ಒಳಗೊಂಡ...

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ವಿವಾದಾತ್ಮಕ ಭೂ ಸ್ವಾಧೀನ ಮಸೂದೆ ಕುರಿತು ರೈತರ ಸಲಹೆ ಪಡೆಯಲು ಎಂಟು ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಸತ್ಯಪಾಲ್ ಮಲಿಕ್ ನೇತೃತ್ವದಲ್ಲಿ ಈ ಸಮಿತಿ ರಚಿಸಲಾಗಿದ್ದು, ಸಮಿತಿಯಲ್ಲಿ ಮಲಿಕ್ ಸೇರಿದಂತೆ ಬಿಜೆಪಿಯ ಏಳು ಸಂಸದರು ಹಾಗೂ ಓರ್ವ ಚಾರ್ಟೆಡ್ ಅಕೌಂಟೆಂಟ್‌ನ್ನು ಒಳಗೊಂಡಿದೆ.
ಈ ಸಮಿತಿಯ ಸದಸ್ಯರು ಉದ್ದೇಶಿತ ಭೂ ಸ್ವಾಧೀನ ಮಸೂದೆ ಬಗ್ಗೆ ರೈತರು ಹಾಗೂ ಇತರೆ ಸಂಘ-ಸಂಸ್ಥೆಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.
ಸಂಸದರಾದ ಭುಪೇಂದರ್ ಯಾದವ್, ರಾಮ್ ನಾರಾಯಣ ದುಡಿ, ಹುಕಮ್ ದೇವ್ ನಾರಾಯಣ್, ರಾಕೇಶ್ ಸಿಂಗ್, ಸಂಜಯ್ ದೋತ್ರೆ ಮತ್ತು ಸುರೇಶ್ ಅಂಗಡಿ ಹಾಗೂ ಚಾರ್ಟೆಡ್ ಅಕೌಂಟೆಂಟ್ ಗೋಪಾಲ್ ಅಗರವಾಲ್ ಅವರು ಶಾ ಸಮಿತಿಯ ಸದಸ್ಯರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


