ದೇಶ

ಪಾಕ್ ಬೋಟ್‌ ಸ್ಫೋಟ: ವಿಡಿಯೋ ಬಿಡುಗಡೆ ಮಾಡಿದ ಕೇಂದ್ರ

ಕಳೆದ ಡಿಸೆಂಬರ್‌ 31ರಂದು ಗುಜರಾತಿನ ಪೋರಬಂದರ್‌ ಬಳಿ ಪಾಕ್ ಮೀನುಗಾರಿಕೆ ಬೋಟ್ ಸ್ಫೋಟ ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ಶುಕ್ರವಾರ ವಿಡಿಯೋ ಬಿಡುಗಡೆ ಮಾಡಿದೆ.

Published On :

ನವದೆಹಲಿ: ಕಳೆದ ಡಿಸೆಂಬರ್‌ 31ರಂದು ಗುಜರಾತಿನ ಪೋರಬಂದರ್‌ ಬಳಿ ಪಾಕ್ ಮೀನುಗಾರಿಕೆ ಬೋಟ್ ಸ್ಫೋಟ ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ಶುಕ್ರವಾರ ವಿಡಿಯೋ ಬಿಡುಗಡೆ ಮಾಡಿದೆ.

ಭಾರತೀಯ ಕರಾವಳಿ ರಕ್ಷಣ ಪಡೆಯ ಡಿಐಜಿ ಬಿ.ಕೆ ಲೋಶಾಲಿ ಅವರು ಡಿ.31ರಂದು ಗುಜರಾತ್‌ನ ಪೋರಬಂದರ್‌ ಬಳಿ ಶಸ್ತ್ರಾಸ್ತ್ರ ತುಂಬಿದ್ದ ಪಾಕ್‌ ಉಗ್ರರ ಬೋಟನ್ನು ಸ್ಫೋಟಿಸಿದ್ದು ತಮ್ಮ ಪಡೆಯೇ ಎಂದು ಹೇಳಿದ್ದರು.

ಲೋಶಾಲಿ ಹೇಳಿಕೆ ಮತ್ತು ರಕ್ಷಣಾ ಸಚಿವಾಲಯದ ಈ ಹಿಂದಿನ ಹೇಳಿಕೆಗೂ ಅಂತರವಿದ್ದುದ್ದರಿಂದ ಈ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪಾಕ್ ಸಹ ಆಕ್ಷೇಪ ವ್ಯಕ್ತಪಡಿಸಿತ್ತು.

ಭಾರತದೆಡೆಗೆ ಬರುತ್ತಿದ್ದ, ಶಸ್ತ್ರಾಸ್ತ್ರ ತುಂಬಿಕೊಂಡಿದ್ದ, ಪಾಕ್‌ ಮೀನುಗಾರಿಕೆ ಬೋಟಿಗೆ ಬೆಂಕಿ ಕೊಟ್ಟು ಅದು ಸ್ಫೋಟಗೊಳ್ಳುವಂತೆ ಮಾಡಿದವರು ಬೋಟಿನಲ್ಲಿದ್ದ ಪಾಕ್‌ ಉಗ್ರರೇ ಎನ್ನುವುದನ್ನು ಮನವರಿಕೆ ಮಾಡುವ ಹಾಗೂ ಈ ಕುರಿತ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನವಾಗಿ ರಕ್ಷಣಾ ಸಚಿವಾಲಯವು ನಡು ಸಮುದ್ರದಲ್ಲಿ ಸುಟ್ಟು ಹೋಗುತ್ತಿರುವ ಬೋಟಿನ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಉಗ್ರರ ಬೋಟನ್ನು ಸ್ಫೋಟಿಸಿದ್ದು ಬೋಟಿನೊಳಗಿದ್ದ ಪಾಕ್‌ ಉಗ್ರರೇ ಎಂದು ರಕ್ಷಣಾ ಸಚಿವ ಮನೋಹರ್‌ ಪಾರೀಕರ್‌ ಹೇಳಿದ್ದು, ಇದಕ್ಕೆ ಪೂರಕವಾದ ಸಾಕ್ಷ್ಯವನ್ನು ತೋರಿಸುವುದಾಗಿ ಈ ಹಿಂದೆ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.